ಸಾಮಾಜಿಕ
ಸಹೋದರಿಯ ಮದುವೆ ಮೆಹಂದಿ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುತ್ತಲೇ ಏಕಾಏಕಿ ಕುಸಿದು ಬಿದ್ದು ಯುವತಿ ಸಾವು

Views: 194
ಸಹೋದರಿಯ ಮದುವೆ ಮೆಹಂದಿ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಯುವತಿಗೆ ಹೃದಯಾಘಾತ ಸಂಭವಿಸಿ ಸಾವನಪ್ಪಿದ ಘಟನೆ ಮೀರತ್ನಲ್ಲಿ ನಡೆದಿದೆ. ರಿಂಷಾ (18) ಮೃತ ಯುವತಿ.
ಮದುವೆ ಮೆಹಂದಿ ಶಾಸ್ತ್ರದಲ್ಲಿ ಎಲ್ಲರೂ ಸೇರಿ ಡ್ಯಾನ್ಸ್ ಮಾಡುತ್ತಿದ್ದರು. ಇದೇ ವೇಳೆ ಯುವತಿಯೊಬ್ಬಳು ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಇನ್ನು, ಯುವತಿ ರಿಂಷಾ ಡ್ಯಾನ್ಸ್ ಮಾಡುತ್ತ ದಿಢೀರ್ ಕೆಳಗೆ ಕುಸಿದು ಬಿಳುತ್ತಿರೋ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯುವತಿ ಕೆಳಗೆ ಬಿಳುತ್ತಿದ್ದಂತೆ ಕೂಡಲೇ ಅಲ್ಲೇ ಇದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಆಗಿರೋ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.






