ಕರಾವಳಿ

ಕುಂದಾಪುರ : ಹೆಂಗವಳ್ಳಿ ಸಮೀಪ ರೆಸಾರ್ಟ್ ಈಜು ಕೊಳದಲ್ಲಿ ಮುಳುಗಿ ಬಾಲಕ ಸಾವು 

Views: 205

ಕುಂದಾಪುರ: ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್ ಗೆ  ರಂಜಾನ್ ಹಬ್ಬದ ಪ್ರಯುಕ್ತ ಕುಟುಂಬದ ಸದಸ್ಯರೊಂದಿಗೆ ಪ್ರವಾಸಕ್ಕೆ ತೆರಳಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿ ಈಜುಕೊಳದ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಪಟ್ಟ ಬಾಲಕ ಹೂಡೆಯ ಮುಹಮ್ಮದ್ ಅರೀಝ್ (10) ಎಂದು ತಿಳಿದುಬಂದಿದೆ.

ಈತ ಹೂಡೆಯ ದಾರುಸ್ಸಲಾಮ್  ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗುರುವಾರ ಮನೆ ಮಂದಿಯೊಂದಿಗೆ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್ ಗೆ ಹೋಗಿದ್ದ ಸಂದರ್ಭದಲ್ಲಿ ಸ್ವಿಮಿಂಗ್ ಫುಲ್‌’ನ ನೀರಿಗೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ.

ಮಗುವಿನ ಸಾವಿಗೆ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್ ಅವರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ. ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ದುರ್ಘಟನೆ ಸಂಭವಿಸಿದೆಯೆಂದು ದೂರಿನಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button