ಕರಾವಳಿ
ಅಣ್ಣಪ್ಪ ಪಂಜುಲಿ೯ ನೇಮೋತ್ಸವ

Views: 14
ಧಮ೯ದೊಡೆಯ ಶ್ರೀ ಮಂಜುನಾಥನ ಆಪ್ತ ಸೇವಕ ಅಣ್ಣಪ್ಪ ಪಂಜುಲಿ೯ ಬಹಳ ಕಾರಣೀಕ ಶಕ್ತಿಗಳಲ್ಲಿ, ತನ್ನ ಶಕ್ತಿ ಕಾರಣೀಕವನ್ನು ಮೆರೆಯುತ್ತಾ ತನ್ನ ಭಕ್ತರ ಪೊರೆಯುವ ದೈವ. ಪಂಜುಲಿ೯ಯ ಹಿನ್ನಲೆಯನ್ನು ಅರೆಸುತ್ತಾ ಸಾಗಿದಾಗ ತುಳುನಾಡಿನ ಪಾಡ್ದನಗಳೊಂದರಲ್ಲಿ ಶ್ರೀ ಸ್ವಾಮಿ ಪಂಜುಲಿ೯ಯ ಬಗ್ಗೆ ಮಾಹಿತಿ ದೊರೆತಿದೆ.
ಇತ್ತೀಚೆಗೆ ತೊಂಬಟ್ಟು ಕಬ್ಬಿನಾಲೆ ದಿ. ಸುಬ್ರಾಯ ಶೆಟ್ಟಿಗಾರ, ಮಕ್ಕಳು ಮತ್ತು ಕುಟುಂಬಿಕರಿಂದ ಅಣ್ಣಪ್ಪ ಪಂಜುಲಿ೯ ದೈವದ ಹರಕೆಯ ಸಿರಿ ಸಿಂಗಾರ ನೇಮೋತ್ಸವವು ಅವರ ಕುಟುಂಬದವರು ಆರಾಧಿಸಿಕೊಂಡು ಬಂದಿರುವ ಬೃಹ್ಮಾವರ ತಾಲೂಕಿನ ಪಡು ನೀಲಾವರ ದಿ. ನಾಗಯ್ಯ ಶೆಟ್ಟಿಗಾರ ಕುಟುಂಬಿಕರ ‘ಶಾರದ ನಿವಾಸ ‘ ವಠಾರದಲ್ಲಿ ಶೃದ್ಧೆ, ಭಕ್ತಿಯಿಂದ ಕುಟುಂಬಿಕರ ಉಪಸ್ಥಿತಿಯಲ್ಲಿ ನಡೆಯಿತು.







