ಕ್ರೀಡೆ
ಇಷ್ಟಾರ್ಥಸಿದ್ಧಿಗಾಗಿ ಸೌತಡ್ಕ ಗಣಪನ ಮೊರೆ ಹೋದ ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್!

Views: 47
ಮಂಗಳೂರು:ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಅವರು ಧರ್ಮಸ್ಥಳ ಸಮೀಪ ಇರುವ ಶ್ರೀ ಕ್ಷೇತ್ರ ಸೌತಡ್ಕ ಗಣಪನ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶ್ರೀ ಕ್ಷೇತ್ರ ಸೌತಡ್ಕ ಬಯಲನ್ನೇ ಆಲಯವಾಗಿಸಿರುವ ಪುರಾಣ ಪ್ರಸಿದ್ಧ ದೇವಾಲಯ. ಈ ಪುಣ್ಯ ಕ್ಷೇತ್ರದಲ್ಲಿ ಹರಕೆ ಕಟ್ಟಿಕೊಂಡರೆ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತೆ ಅನ್ನೋ ನಂಬಿಕೆಯಿದೆ.
ಸೌತಡ್ಕ ದೇವಾಲಯದಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಈಡೇರಲು ಒಂದು ಗಂಟೆ ಕಟ್ಟುತ್ತಾರೆ. ಅವರ ಇಷ್ಟಾರ್ಥ 45 ದಿನಗಳ ಒಳಗಾಗಿ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆಯಿದೆ.
ಸದ್ಯ ಟೀಂ ಇಂಡಿಯಾದಲ್ಲಿ ಉತ್ತಮ ಫಾರ್ಮ್ನಲ್ಲಿರುವ ಕೆ.ಎಲ್ ರಾಹುಲ್ ಮುಂದಿನ ತಮ್ಮ ಭವಿಷ್ಯ ಉಜ್ವಲವಾಗಿರಲೆಂದು ದೇವರ ಮೊರೆ ಹೋಗಿದ್ದಾರೆ. ಇಂದು ಕೊಲ್ಲೂರು ಮುಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಧರ್ಮಸ್ಥಳ ಸಮೀಪ ಇರುವ ಸೌತಡ್ಕ ದೇಗುಲಕ್ಕೂ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.






