ಕರಾವಳಿ

ಮಂಗಳೂರು ಮೈಸಂದಾಯ ಕೋಲದಲ್ಲಿ  ”ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ, ನಾನಿದ್ದೇನೆ” ಎಂದು ರಿಷಬ್ ಶೆಟ್ಟಿಗೆ ದೈವದ ಆಶೀರ್ವಾದ..! 

Views: 117

ಜನವರಿ 5 ರಂದು ಮಂಗಳೂರಿನಲ್ಲಿ  ನಡೆದ ಕೋಲಾದಲ್ಲಿ ಭಾಗಿಯಾಗಿ ದೈವದ ಅನುಗ್ರಹ ಪಡೆದುಕೊಂಡ ಅವರಿಗೆ “ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ನಾನಿದ್ದೇನೆ” ಎಂದು ದೈವ ಅಭಯ ನೀಡಿದೆ..!

ನಟ ರಿಷಬ್ ಶೆಟ್ಟಿ ಮಂಗಳೂರು ವಜ್ರದೇಹಿ ಮಠದ ದೈವ ಕೋಲದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರುನಟ ರಿಷಬ್ ಶೆಟ್ಟಿಯನ್ನು ಕೋಲಕ್ಕೆ ಆಗಮಿಸುವಂತೆ ಈ ಹಿಂದೆ ಆಹ್ವಾನಿಸಿದ್ದರು. ಅವರ ಆಹ್ವಾನದ ಬೆನ್ನಲ್ಲೇ ರಿಷಬ್ ಶೆಟ್ಟಿ ವಜ್ರದೇಹಿ ಮಠದಲ್ಲಿ ನಡೆದ ನೇಮೋತ್ಸವದಲ್ಲಿ ಭಾಗಿ ಆಗಿದ್ದಾರೆ. ಕಾಂತಾರ ಅಧ್ಯಾಯ 1ಕ್ಕೆ ಅಡಿಗಲ್ಲು, ದೈವದ ಮೊರೆ ಹೋದ ರಿಷಬ್ ಶೆಟ್ಟಿ! ಈ ಹಿಂದೆ ನಟ ರಿಷಬ್ ಶೆಟ್ಟಿ ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿಯನ್ನು ಆಹ್ವಾನ ನೀಡಿದ್ದಾರೆ.

ರಿಷಬ್ ಶೆಟ್ಟಿ ಬಳಿಕ ರಾಮಮಂದಿರ ಉದ್ಘಾಟನೆಗೆ ನಟ ಯಶ್‌ಗೂ ಆಹ್ವಾನ “ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ. ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ” ಎಂದು ಸನ್ನೆ ಮಾಡಿ ದೈವ ಆಶೀರ್ವದಿಸಿದೆ. ದೈವಾರಾಧನೆಯ ಕಟ್ಟುಪಾಡು ಅಧ್ಯಾಯನ ಮಾಡಿಕೊಂಡು, ದೈವದ ನೆಲೆಯನ್ನು ಅರಿತು ಸಿನಿಮಾದ ಮೂಲಕ ಜನರ ಮುಂದಿಡಬೇಕು ಎಂದು ನಟ ರಿಷಬ್ ಶೆಟ್ಟಿ ತೋರಿಸಬೇಕು ಎಂದು ವಜ್ರದೇಹಿ ಮಠದ ದೈವ ಕೋಲಕ್ಕೆ ಬಂದಿದ್ದರು. ನಟ ರಿಷಬ್ ಶೆಟ್ಟಿ ತಲೆ ಸವರಿ ಆಶೀರ್ವಾದಿಸಿದ ದೈವ ಕೋಲದಲ್ಲಿ ನಟ ರಿಷಭ್ ಶೆಟ್ಟಿಗೆ ದೈವ ಅಭಯ ನೀಡಿದೆ. ಗುರುಪುರ ವಜ್ರದೇಹಿ ಮಠದಲ್ಲಿ ನಡೆದ ಜಾತ್ರೆಯ ಮೈಸಂದಾಯ ಕೋಲದಲ್ಲಿ ದೈವ ರಿಷಬ್ ಶೆಟ್ಟಿ ತಲೆ ಸವರಿ ಆಶೀರ್ವಾದಿಸಿದೆ. ಇದು ನಟನಿಗೆ ಮತ್ತಷ್ಟು ಹುರುಪು ನೀಡಿದೆ. ಈಗಾಗಲೇ ಕೋಲಾ, ದೈವಗಳ ಹಿನ್ನಲೆಯಲ್ಲಿ ಸಿನಿಮಾ ಮಾಡಿರುವ ಅವರಿಗೆ ದೈವದ ಆಶೀರ್ವಾದ ಸಿಕ್ಕಿರುವುದು ಅದೃಷ್ಟವೇ ಸರಿ. ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಅಪ್ಪಟ ಕನ್ನಡದ ಸಿನಿಮಾ ‘ಕಾಂತಾರ’ ಬಿಡುಗಡೆಯಾದ ಮೇಲೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸದ್ದು ಮಾಡಿತ್ತು. ನಟ ರಿಷಬ್ ಶೆಟ್ಟಿ ನಟನೆ-ನಿರ್ದೇಶನಕ್ಕೆ ಭಾರೀ ಬೆಂಬಲ ಸಿಕ್ಕಿದೆ  ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 400 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಬಳಿಕ ಈ ಸಿನಿಮಾದ ಸೀಕ್ವೆಲ್ ನಿರೀಕ್ಷಿಸುತ್ತಿದ್ದವರಿಗೆ ರಿಷಬ್ ಶೆಟ್ಟಿ ಪ್ರಿಕ್ವೇಲ್ ಘೋಷಿಸಿ ಶಾಕ್ ನೀಡಿದ್ದರು. ಈ ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಘೋಷಿಸಿದ್ದಾರೆ. ಇದಕ್ಕೂ ಅವರದ್ದೇ ನಿರ್ದೇಶನ ಇರಲಿದೆ. ‘ಕಾಂತಾರ’ಗೂ ಮುನ್ನ ಏನಾಗಿತ್ತು ಅನ್ನೋದನ್ನು ‘ಕಾಂತಾರ ಚಾಪ್ಟರ್ 1’ ರಲ್ಲಿ ಹೇಳಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾಕ್ಕೂ ಬಂಡವಾಳ ಹಾಕುತ್ತಿದೆ.

 

Related Articles

Back to top button