ಡಿ.30ಕ್ಕೆ ವಕ್ವಾಡಿ 8 ಸ್ಟಾರ್ ಕ್ರಿಕೆಟರ್ಸ್ ಟ್ರೋಫಿ- 2023, ರಾಜ್ಯಮಟ್ಟದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

Views: 59
ಕುಂದಾಪುರ: ವಕ್ವಾಡಿ- ತೆಂಕಬೆಟ್ಟು,ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಚಿಕ್ಕು ಸಪರಿವಾರ ದೇವಸ್ಥಾನದ ಎದುರುಗಡೆ ಮೈದಾನದಲ್ಲಿ 8 ಸ್ಟಾರ್ ಕ್ರಿಕೆಟರ್ಸ್ ಟ್ರೋಫಿ- 2023 ಇದರ 8ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್ ಪಂದ್ಯಾಟ ಡಿ. 30ಕ್ಕೆ ಸಂಜೆ 7 ರಿಂದ ನಡೆಯಲಿದೆ.
ಸಂಜೆ 7 ಕ್ಕೆ ಪಂದ್ಯಾಟಕ್ಕೆ ಚಾಲನೆ
ಹಿಂದೂ ಮುಖಂಡ ಪುತ್ತೂರು ಶ್ರೀ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರದ ಶಾಸಕ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿ, ಆಪತ್ಬಾಂಧವ ಜೀವರಕ್ಷಕ ಶ್ರೀ ಈಶ್ವರ ಮಲ್ಪೆ, ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಮಂಜುನಾಥ್ ಶೆಟ್ಟಿಗಾರ್, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ಶ್ರೀ ರವಿರಾಜ್ ಶೆಟ್ಟಿ, ದೇವರಾಡಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಚಿಕ್ಕು ಸಪರಿವಾರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ ಜನ್ಸಾಲೆ ಶಿವರಾಮ್ ಶೆಟ್ಟಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಕ್ವಾಡಿ 8 ಸ್ಟಾರ್ ಕ್ರಿಕೆಟರ್ಸ್ ಅಧ್ಯಕ್ಷ ಶ್ರೀ ಆದರ್ಶ ಶೆಟ್ಟಿ, ಗೌರವಾಧ್ಯಕ್ಷರಾದ ಶ್ರೀ ಉದಯ ಶೆಟ್ಟಿ ಹಾಗೂ ಕಾರ್ಯದರ್ಶಿ ಶ್ರೀ ವಿನಯ್ ಶೆಟ್ಟಿ ತಿಳಿಸಿದ್ದಾರೆ.
ಸಂಪರ್ಕ: ಆದರ್ಶ (9880467319) ವಿನಯ (8618248929) ಉದಯ (9900903254)







