ಪ್ರವಾಸೋದ್ಯಮ

ರಾಮನಗರ: ಸ್ನೇಹಿತರ ಜೊತೆ ಸಾವನದುರ್ಗ ಚಾರಣಕ್ಕೆ ಹೋದ ಯುವಕ ನಾಪತ್ತೆ

Views: 3

ಮಾಗಡಿ: ತಾಲ್ಲೂಕಿನ ಸಾವನದುರ್ಗ ಬೆಟ್ಟಕ್ಕೆ ಭಾನುವಾರ ಚಾರಣಕ್ಕೆ ಬಂದಿದ್ದ ಬೆಂಗಳೂರಿನ ಉದ್ಯೋಗಿಯೊಬ್ಬರು ಕಾಣೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶದ ಗಗನ್‌ (30) ಕಾಣೆಯಾದ ಯುವಕ. ಕಚೇರಿಗೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತನ ಜೊತೆ ಸಾವನದುರ್ಗ ಬೆಟ್ಟಕ್ಕೆ ಚಾರಣ ಬಂದಿದ್ದ ಸ್ನೇಹಿತನೊಂದಿಗೆ ಬೆಟ್ಟ ಏರಿದ್ದ ಯುವಕ ಇದ್ದಕ್ಕಿದ್ದಂತೆಯೇ ಸಂಪರ್ಕ ಕಡಿದುಕೊಂಡಿದ್ದಾನೆ.

ಜೊತೆಗಿದ್ದ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಿನ್ನೆಯಿಂದ ಯುವಕನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲಿಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್‌ ಬಳಿಸಿ ಹುಡುಕಾಟ ನಡೆಸಿದ್ದಾರೆ.

ಸೋಮವಾರ ಕತ್ತಲೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇನ್ನೂ ಯುವಕನ ಸುಳಿವು ಸಿಕ್ಕಿಲ್ಲ. ಮಂಗಳವಾರ ಮುಂಜಾನೆ ಮರಲಗೊಂಡಲ ಕಡೆಯ ಕಾಲುದಾರಿಯಿಂದ ಹುಡುಕಾಟ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button