ಕರಾವಳಿ
ಕುಂದಾಪುರ:ಸಿಡಬ್ಲ್ಯೂಸಿ ಕಾರ್ಯನಿರ್ವಾಹಕ ನಿರ್ದೇಶಕ ಶಿವಮೂರ್ತಿ ಭಂಡಾರ್ಕರ್ ನಿಧನ

Views: 80
ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ನಮ್ಮ ಭೂಮಿಯಿಂದ ಕಾರ್ಯಾಚರಿಸುತ್ತಿರುವ ಕನ್ಸರ್ನ್ಡ ಫಾರ್ ವರ್ಕಿಂಗ್ ಚಿಲ್ಡ್ರನ್ (ಸಿಡಬ್ಲ್ಯೂಸಿ) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶಿವಮೂರ್ತಿ ಭಂಡಾರ್ಕರ್ (60) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕುಂದಾಪುರ ನಿವಾಸಿ ಆಗಿರುವ ಅವರು ಮೂರು ದಶಕಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ವಂದೇ ಮಾತರಂ ಸೌಹಾರ್ದ ಸಹಕಾರಿಯ ಸ್ಥಾಪಕ ನಿರ್ದೇಶಕರೂ ಆಗಿದ್ದರು. ಅವರು ಸಿಡಬ್ಲ್ಯೂಸಿ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ದುಡಿಯುತ್ತಿರುವ ಪತ್ನಿ ಜಯಂತಿ. ಪುತ್ರ, ಪುತ್ರಿಯನ್ನು ಅಗಲಿದ್ದಾರೆ.