ಕರಾವಳಿ
ಉದ್ಯಾವರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವ ಪತ್ತೆ

Views: 0
ಉಡುಪಿ: ಉಡುಪಿಯ ಕಾಪು ಸಮೀಪದ ಉದ್ಯಾವರದಲ್ಲಿ ಡಿ.13ರಂದು ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ಮೂಲದ ರವೀಂದ್ರ ಭಟ್ (52) ಎಂಬವರ ಮೃತ ದೇಹ ಪತ್ತೆಯಾಗಿದೆ.
ರವೀಂದ್ರ ಭಟ್ ಅವರು ಉಡುಪಿಯ ಎಲೆಕ್ಟ್ರಾನಿಕ್ಸ್ ಮತ್ತು ಗೃಹೊಪಯೋಗಿ ಸಂಸ್ಥೆಯೊಂದರ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗೆ ಉದ್ಯಾವರ ಸೇತುವೆಯ ಮೇಲೆ ಸ್ಕೂಟಿ ದ್ವಿಚಕ್ರ ವಾಹನವೊಂದು ಅನಾಥವಾಗಿ ಪತ್ತೆಯಾಗಿದ್ದು, ಅದರಲ್ಲಿ ಮೊಬೈಲ್ ಫೋನು, ಪರ್ಸ್, ದಾಖಲೆ ಪತ್ರಗಳು ಮತ್ತು ವ್ಯಕ್ತಿಯ ಚಪ್ಪಲಿಗಳು ದೊರಕಿದ್ದವು.
ಸ್ಥಳೀಯರು ಕಟಪಾಡಿ ಹೊರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು, ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಪಾಪನಾಶಿನಿ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರು. ಶವ ಪತ್ತೆಯಾಗಿದೆ. ರವೀಂದ್ರ ಭಟ್ ಅವರು ಯಾಕಾಗಿ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ತಿಳಿದು ಬಂದಿಲ್ಲ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.