ಬ್ರಹ್ಮಾವರ: ಶೆಟ್ಟಿಗಾರ್ ಎಂಟರ್ಪ್ರೈಸಸ್ 3ನೇ ಮಾರಾಟ ಮಳಿಗೆ ಉದ್ಘಾಟನೆ

Views: 4
.ಬ್ರಹ್ಮಾವರ :ಬಾರ್ಕೂರು ರಂಗನಕೆರೆ ಶೆಟ್ಟಿಗಾರ ಇಂಡಸ್ಟ್ರೀಸ್ ಉತ್ಪಾದನೆಯ ಶೆಟ್ಟಿಗಾರ ಎಂಟರ್ಪ್ರೈಸಸ್ 3ನೇ ಮಾರಾಟ ಮಳಿಗೆಯನ್ನು ಬ್ರಹ್ಮಾವರದಲ್ಲಿ ರವಿವಾರ ಚಾಲನೆ ದೊರೆತಿದೆ.
ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮರಗಳ ಬಳಕೆ ಕಡಿಮೆಯಾಗಿದ್ದರಿಂದ ಅದನ್ನು ಸರಿದೂಗಿಸಲು ಮನಮೋಹಕ ಗ್ರಹ ಉಪಯೋಗಿ ಅಲಂಕಾರಿಕ ಸಾಧಕಗಳು ಮನೆಯ ಮನೆ ಬೆಳಗುತ್ತದೆ, ಶ್ರೀನಿವಾಸ ಶೆಟ್ಟಿಗಾರರು ಈ ಮೂಲಕ ನೂರಾರು ಜನರಿಗೆ ಉದ್ಯೋಗ ನೀಡಿದ್ದಲ್ಲದೆ, ಸಾಮಾಜಿಕ, ಧಾರ್ಮಿಕ ,ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇನ್ನಷ್ಟು ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು .
ಮುಖ್ಯ ಅತಿಥಿಗಳಾಗಿ ಬಾರಕೂರಿನ ಉದ್ಯಮಿ ಶಾಂತರಾಮ್ ಶೆಟ್ಟಿ, ಸಣ್ಣ ಕೈಗಾರಿಕಾ ಸಂಸ್ಥೆಯು ಅಧ್ಯಕ್ಷ ಹರೀಶ್ ಕುಂದರ್, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ ಮಹೇಶ್ ಶೆಟ್ಟಿ, ಜಿ.ಪಂ.ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಕೆನರಾ ಬ್ಯಾಂಕ್ ಎಂಜಿಎಂ ರಾಮ ನಾಯ್ಕ್, ಬಿರ್ತಿ ರಾಜೇಶ್ ಶೆಟ್ಟಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಆರ್ ಶೆಟ್ಟಿ, ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸಿ ಜಯರಾಮ ಶೆಟ್ಟಿಗಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಜಿ.ಶಂಕರ್ ಅವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಹಲವಾರು ಗಣ್ಯರನ್ನು ಗುರುತಿಸಿ ಗೌರವಿಸಲಾಯಿತು. ಶೆಟ್ಟಿಗಾರ್ ಇಂಡಸ್ಟ್ರೀಸ್ ಮಾಲಕ ಬಾರ್ಕೂರು ರಂಗನಕೆರೆ ಶ್ರೀನಿವಾಸ ಶೆಟ್ಟಿಗಾರ್ ಸ್ವಾಗತಿಸಿದರು. ದಾಮೋದರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಸುಧಾಕರ್ ರಾವ್ ವಂದಿಸಿದರು.
ಶೆಟ್ಟಿಗಾರ್ ಎಂಟರ್ಪ್ರೈಸಸ್ ಶೋ ರೂಂನಲ್ಲಿ ಏನಿದೆ!
ಫೈಬರ್ ಉತ್ಪನ್ನಗಳು, ಶಿಲೆಗಲ್ಲಿನ ತುಳಸಿ ಕಟ್ಟೆ, ಬೆಂಚು,ಮಣ್ಣಿನ ಶಿಲ್ಪದ ಕಲೆಯ ಉತ್ಪನ್ನಗಳು, ಅಲ್ಯುಮಿನಿಯಂ ಶಟರ್, ಮರದ ದಾರಂದ ,ಕಿಟಕಿ ,ಸಿಮೆಂಟ್ ದಾರಂದ, ಬೆಂಚು, ಬೇಲಿ ಕಂಬ, ದನ, ಜಿಂಕೆ ,ಕೊಕ್ಕರೆ, ಆನೆ, ಸಿಟ್ ಔಟ್ ಕಂಬ, ನಾಯಿ ಮನೆ, ಜಿರಾಫೆ ವಿವಿಧ ಪಕ್ಷಿಗಳು, ಮನಮೋಹಕ ಗ್ರಹಪಯೋಗಿ ಸಾಧನ ವಸ್ತುಗಳು ಈ ಶೋರೂಂನಲ್ಲಿ ಆಕರ್ಷಣೆಗೊಂಡಿದೆ.