ಟೀಂ ಇಂಡಿಯಾವನ್ನು ಮಣಿಸಿ 6ನೇ ಬಾರಿ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡ ಆಸ್ಟ್ರೇಲಿಯ

Views: 3
ಇಂಡಿಯಾ ನೀಡಿದ 240 ರನ್ಗಳ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಕಣಕ್ಕಿಳಿದರು. ಆದರೆ ಮೊಹಮ್ಮದ್ ಶಮಿ ಮೊದಲ ಓವರ್ ಎಸತಕ್ಕೆ ವಾರ್ನರ್ 7 ರನ್ಗಳಿಸಿ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನತ್ತ ನಡೆದರು.
ಬಳಿಕ ಬಂದ ಮಿಚೆಲ್ ಮಾರ್ಚ್ ಕೂಡ 15 ಎಸೆತಕ್ಕೆ 15 ರನ್ ಬಾರಿಸಿವುದರ ಜೊತೆಗೆ ಬೂಮ್ರಾ ಎಸೆತಕ್ಕೆ ಔಟ್ ಆದರು. ಈ ನಡುವೆ 1 ಫೋರ್ ಮತ್ತು ಸಿಕ್ಸ್ ಬಾರಿಸಿದ್ದಾರೆ. ನಂತರ ಬಂದ ಸ್ಟೀವ್ ಕೂಡ ಕ್ರಿಸ್ನಲ್ಲಿ ಉಳಿಯಲು ಅಶಕ್ತರಾದರು. 9 ಎಸೆತಕ್ಕೆ 4 ರನ್ ಬಾರಿಸುವ ಮೂಲಕ ಬ್ರೂಮಾಗೆ ವಿಕೆಟ್ ಒಪ್ಪಿಸಿದರು.
ಆದರೆ ಇಡೀ ತಂಡದ ಜವಬ್ದಾರಿ ವಹಿಸಿಕೊಂಡ ಟ್ರಾವಿಶ್ 120 ಎಸೆತಕ್ಕೆ 15 ಪೋರ್, 4 ಸಿಕ್ಸ್ ಬಾರಿಸುವುದರವ ಜೊತೆಗೆ 137 ರನ್ ಬಾರಿಸಿದ್ದಾರೆ. ಇವರಿಗೆ ಜೊತೆಯಾಗಿ ನಿಂತ ಮಾರ್ನಸ್ ಕೂಡ 110 ಎಸೆತಕ್ಕೆ 4 ಬೌಂಡರಿ ಬಾರಿಸುವ ಮೂಲಕ 58 ರನ್ ಬಾರಿಸಿದ್ದಾರೆ. ಆ ಮೂಲಕ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಮಾತ್ರವಲ್ಲದೆ ಈ ಬಾರಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಬೂಮ್ರಾ 2 ವಿಕೆಟ್ ಕಬಳಿಸಿದರೆ, ಸಿರಾಜ್ ಮತ್ತು ಶಮಿ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.







