ಕ್ರೀಡೆ
8-9 ತಿಂಗಳಲ್ಲಿ ನಿವೃತ್ತಿ ನಿಧ೯ರಿಸುವೆ : ಧೋನಿ

Views: 0
ಮುಂದಿನ 8 ರಿಂದ 9 ತಿಂಗಳ ಒಳಗಾಗಿ ನಿವೃತ್ತಿಯ ಬಗ್ಗೆ ಪ್ರಕಟಿಸಲಿದ್ದೇನೆ ಯಾವುದೇ ಆತುರವಿಲ್ಲ ಎಂದು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಐಪಿಎಲ್ ನಲ್ಲಿ ಫೈನಲ್ ಹಂತಕ್ಕೇರುವುದು ಅಷ್ಟು ಸುಲಭದ ಮಾತಲ್ಲ ತಂಡದ ಎಲ್ಲರ ಸಂಘಟಿತ ಪ್ರಯತ್ನದಿಂದ ನಾವು ಈ ಹಂತಕ್ಕೇರಲು ಸಾಧ್ಯವಾಗಿದೆ, ಅಗ್ರ ಕ್ರಮಾಂಕದ ಆಟಗಾರರು ಅಮೋಘವಾಗಿ ಆಡಿದ್ದಾರೆ, ಮಧ್ಯಮ ಕ್ರಮಾಂಕದ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ , ಕಳೆದ ನಾಲ್ಕು ತಿಂಗಳಿಂದ ಮನೆಯಿಂದ ಹೊರಗಿದ್ದೆ, ನಿವೃತ್ತಿಯ ಬಗ್ಗೆ ನಿಧಾ೯ರಕ್ಕೆ ಸಾಕಷ್ಟು ಸಮಯವಿದೆ.
ಈ ಋತುವಿನಲ್ಲಿ ಐಪಿಎಲ್ ಗಾಗಿ ಸುದೀಘ೯ ಸಮಯದಿಂದ ತಯಾರಿ ನಡೆಸಿದ್ದರಿಂದ ಬಹಳಷ್ಟು ಆಯಾಸಗೊಂಡಿದ್ದೇನೆ, ಶ್ರೇಷ್ಠ ನಿವ೯ಹಣೆ ನೀಡುವ ಮೂಲಕ ನಾವೀಗ ಫೈನಲ್ ಹಂತಕ್ಕೇರಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದೇನೆ ಎಂದರು.






