ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ‘ಸು ಫ್ರಮ್ ಸೋ’ ಯಶಸ್ಸಿನ ಒಳಗುಟ್ಟೇನು?

Views: 103
ಕನ್ನಡ ಕರಾವಳಿ ಸುದ್ದಿ: ಬಹುತೇಕ ಹೊಸಬರೇ ಅಭಿನಯಿಸಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಕನ್ನಡದ ‘ಸು ಫ್ರಮ್ ಸೋ’ (Su From So) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಈ ಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದ ದಾಖಲೆ ಮುರಿದಿದೆ.
ಈ ಕಡಿಮ ಬಜೆಟ್ ಸಿನಿಮಾ ಐದನೇ ವಾರದಲ್ಲೂ ಥಿಯೇಟರ್‌ಗಳಲ್ಲಿ ಗಟ್ಟಿಯಾಗಿ ನಿಂತಿದೆ. ಬಹುತೇಕ ಹೊಸಬರೇ ಮಾಡಿದ್ದ ಈ ಸಿನಿಮಾ ಪ್ರೇಕ್ಷಕರ, ವೀಕ್ಷಕರ ಮನಗೆದ್ದಿದೆ. ಸರಳ ಕಥೆಯನ್ನು ವಿಭಿನ್ನವಾಗಿ ತೆರೆ ಮೇಲೆ ತಂದಿರುವುದು ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ. ‘ಸು ಫ್ರಮ್ ಸೋ’ ಸಿನಿಮಾ ಐದನೇ ವಾರಕ್ಕೆ ಕಾಲಿಟ್ಟಿದ್ದು 4ನೇ ವೀಕೆಂಡ್‌ನಲ್ಲೂ ಹೊಸ ದಾಖಲೆ ಕಲೆಕ್ಷನ್ ಮಾಡಿದೆ. ಸುಮಾರು 4 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ 2022ರಲ್ಲಿ ರಿಲೀಸ್ ಆದ ‘777 ಚಾರ್ಲಿ’ ಕಲೆಕ್ಷನ್ ಅನ್ನು ಬೀಟ್ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.
ʼಸು ಫ್ರಮ್ ಸೋʼ ಕನ್ನಡ ಚಿತ್ರರಂಗದಲ್ಲಿ ಅತೀ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ 5ನೇ ಸ್ಥಾನದಲ್ಲಿದೆ. ‘ಕೆಜಿಎಫ್ 2’, ‘ಕಾಂತಾರ’, ʼಕೆಜಿಎಫ್ʼ, ‘ವಿಕ್ರಾಂತ್ ರೋಣ’, ‘ಜೇಮ್ಸ್’ ಚಿತ್ರಗಳು ಮೊದಲ ಸ್ಥಾನದಲ್ಲಿವೆ. ‘777ಚಾರ್ಲಿ’ ಸಿನಿಮಾದ ಗಳಿಕೆಯನ್ನು ಮೀರಿ ‘ಸು ಫ್ರಮ್ ಸೋ’ 4ನೇ ಸ್ಥಾನ ಪಡೆದಿದೆ. ಈ ಮೂಲಕ ಹಾರರ್ ಕಾಮಿಡಿ ಜಾನರ್‌ನಲ್ಲಿ ತೆರೆಕಂಡ ಹಿಂದಿಯ ‘ಸ್ತ್ರೀ 2’ ಸಿನಿಮಾದ ಲಾಭದ ಪ್ರಮಾಣವನ್ನೂ ಕೂಡ ʼಸು ಫ್ರಮ್ ಸೋʼ ಸಿನಿಮಾ ಮೀರಿಸಿದೆ ಎನ್ನಲಾಗುತ್ತಿದೆ.
ʼಸು ಫ್ರಮ್ ಸೋʼ ಸಿನಿಮಾ ರಿಲೀಸ್ ಆಗಿ 33ನೇ ದಿನದ ವೇಳೆಗೆ 115.89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ‘777 ಚಾರ್ಲಿ’ ಸಿನಿಮಾ 115 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
‘ಸು ಫ್ರಮ್ ಸೋ’ ಸಿನಿಮಾದಲ್ಲಿ ಕಾಮಿಡಿ, ಎಮೋಷನಲ್, ಹಾರರ್ ಅಂಶಗಳು ಹದವಾಗಿ ಬೆರೆತುಕೊಂಡಿವೆ. ಜೆ.ಪಿ. ತುಮಿನಾಡ್ ನಿರ್ದೇಶನದ ಜತೆಗೆ ನಟಿಸಿದ್ದು, ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ಕೆ. ತುಮಿನಾಡ್, ದೀಪಕ್ ರೈ ಪಾಣಾಜೆ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.