40 ವರ್ಷದ ಮಹಿಳೆಯನ್ನು ಮದುವೆಯಾದ 17ರ ಬಾಲಕ!

Views: 183
ಕನ್ನಡ ಕರಾವಳಿ ಸುದ್ದಿ: 17 ವರ್ಷದ ಬಾಲಕನೊಬ್ಬ ತನ್ನ ತಂದೆಯ 40 ವರ್ಷದ ಎರಡನೇ ಪತ್ನಿಯೊಂದಿಗೆ ಓಡಿ ಹೋದ ಘಟನೆ ಹರಿಯಾಣದ ನೂಹ್ ಜಿಲ್ಲೆಯ ಬಾಸದಲ್ಲಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ರಾಮಕಿಶನ್ ತನ್ನ ಮಗ ಮಲತಾಯಿಯೊಂದಿಗೆ ಸಂಬಂಧ ಬೆಳೆಸಿಕೊಂಡು ಆಕೆಯನ್ನು ವಿವಾಹವಾಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮಗ ಅಪ್ರಾಪ್ತನಾಗಿದ್ದು, ಕಾನೂನುಬದ್ಧ ಮದುವೆ ಸಾಧ್ಯವಿಲ್ಲ ಎಂದು ದೂರಿದ್ದಾರೆ.
ಹಲವು ವರ್ಷಗಳ ಹಿಂದೆ ರಾಮಕಿಶನ್ ಮೊದಲ ಪತ್ನಿ ನಿಧನರಾಗಿದ್ದಾರೆ. ಆಗ ಆತನ ಮಗ ಕೇವಲ ಎರಡು ವರ್ಷದವನಾಗಿದ್ದಾಗ ನಾಪತ್ತೆಯಾಗಿದ್ದ. ಬಹಳ ದಿನ ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಬಳಿಕ ರಾಮಕಿಶನ್ ಎರಡನೇ ಮದುವೆಯಾಗಿದ್ದು, ಈಗ ಆ ದಾಂಪತ್ಯಕ್ಕೆ 15 ವರ್ಷವಾಗಿದೆ. ಎರಡನೇ ಪತ್ನಿಗೆ ಒಬ್ಬ ಮಗಳಿದ್ದಾಳೆ.
ನಾಪತ್ತೆಯಾಗಿದ್ದ ಮಗ ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ ವಾಪಸ್ ಬಂದಿದ್ದು, ತಂದೆ ಮತ್ತು ಮಲತಾಯಿಯೊಂದಿಗೆ ವಾಸಿಸತೊಡಗಿದ್ದ. ಈ ವೇಳೆ ಆತ ಮತ್ತು ಮಲತಾಯಿಯ ನಡುವೆ ಅನೈತಿಕ ಸಂಬಂಧ ಬೆಳೆದು, ಇಬ್ಬರೂ ಮನೆಯಿಂದ ಓಡಿ ಹೋದರು. ಪೊಲೀಸರು ಇಬ್ಬರೂ ಮದುವೆಯಾಗಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ಬಾಲಕನಿಗೆ ಕಾನೂನುಬದ್ಧ ಮದುವೆ ಸಾಧ್ಯವಿಲ್ಲ ಎಂದು ರಾಮಕಿಶನ್ ಆರೋಪಿಸಿದ್ದಾರೆ. ತನಿಖಾಧಿಕಾರಿಯು ಲಂಚ ಪಡೆದು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಿ, ತನಗೆ ನ್ಯಾಯ ಸಿಗುತ್ತಿಲ್ಲ ಎಂದಿದ್ದಾರೆ.
ಪುಂಹಾನಾ ಠಾಣೆಯ ತನಿಖಾಧಿಕಾರಿ ಪುಷ್ಪಾ, ಎರಡು ತಿಂಗಳ ಹಿಂದೆ ಮಹಿಳೆಯನ್ನು ಪತ್ತೆಹಚ್ಚಲಾಗಿತ್ತು ಎಂದು ತಿಳಿಸಿದ್ದಾರೆ. ರಾಮಕಿಶನ್ ಜತೆ ಇರಲು ಇಷ್ಟವಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.