ಜನಮನ

ಅಪಘಾತದಿಂದ ತೀವ್ರ ಗಾಯಗೊಂಡು ಕೋಮಾದಲ್ಲಿರುವ ವಿದ್ಯಾರ್ಥಿನಿಗೆ ಸಹಾಯ ಮಾಡುವಿರಾ…

Views: 969

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ನಿವಾಸಿ, ಭದ್ರಾವತಿಯ ಬಾರಂದೂರು ಹಳ್ಳಿಕೆರೆಯ ಉದಯ ಪೂಜಾರಿ ಇವರ ಮಗಳಾದ ಕುಮಾರಿ ಅಶ್ವಿನಿ ಪ್ರಸ್ತುತ ಶಂಕರನಾರಾಯಣದ ಮದ‌ರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅತ್ಯಂತ ಚುರುಕಾಗಿ ಲವಲವಿಕೆಯಿಂದ ಎಲ್ಲಾ ಮಕ್ಕಳಂತೆ ಇದ್ದ అಶ್ವಿನಿ ದುರದೃಷ್ಟವಶಾತ್ ಜೂನ್ 29ರಂದು ಸಂಬಂಧಿಕರ ಮನೆಯಲ್ಲಿ ದೈವದ ಕೆಲಸ ಮುಗಿಸಿಕೊಂಡು ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಅಮಾಸೆಬೈಲು- ಜಡ್ಡಿನಗದ್ದೆ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿ ಬ್ರೈನ್ ಟ್ರಾಮ್ಯಾಟಿಕ್ (Brain Traumatic Injury) ಆಗಿ ಕೆಎಂಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದಿಗೂ ಕೋಮಾದಲ್ಲಿರುವ ಈಕೆ ಚೇತರಿಸಿಕೊಳ್ಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈಗಾಗಲೇ 4 ಲಕ್ಷ ಕ್ಕಿಂತಲೂ ಹೆಚ್ಚು ಸಾಲ ಮಾಡಿ ಈಕೆಯ ಚಿಕಿತ್ಸೆಗೆ ಹಣ ಖರ್ಚಾಗಿದೆ.ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹೃದಯಿಗಳಾದ ತಾವು ಮಾನವೀಯ ನೆಲೆಯಲ್ಲಿ ಧನ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಆರ್ಥಿಕ ಸಹಾಯಕ್ಕಾಗಿ 

JYOTHI POOJARI

KARNATAKA GRAMINA BANK

AC NO-10950101040236

IFSC CODE- PKGB0010950

BARANDUR BRANCH

BADRAVATHI

PH: 8792165290

 

Related Articles

Back to top button