ಇತರೆ
ಕುಂದಾಪುರ: ಕೆರಾಡಿಯಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಸಾವು
Views: 180
ಕನ್ನಡ ಕರಾವಳಿ ಸುದ್ದಿ : ಹುಲ್ಲು ಕೊಯ್ಯುತ್ತಿದ್ದ ಮಹಿಳೆಯೊಬ್ಬರು ಹಾವು ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮೇ 1ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಕೆರಾಡಿ ಗ್ರಾಮದ ಪ್ರೇಮ ಶೆಡ್ತಿ(47) ಎಂದು ಗುರುತಿಸಲಾಗಿದೆ.
ಇವರು ಮನೆಯ ಪಕ್ಕದಲ್ಲಿರುವ ತೋಟದಲ್ಲಿ ದನಗಳಿಗೆ ಹುಲ್ಲನ್ನು ಕೊಯ್ಯುತ್ತಿದ್ದಾಗ ಕಾಲಿಗೆ ವಿಷದ ಹಾವೊಂದು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






