ಇತರೆ

ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್: ಮಂಥನ 2026 ಬೇಸಗೆ ಶಿಬಿರ ಅದ್ಭುತ ಯಶಸ್ಸಿನೊಂದಿಗೆ ಸಮಾರೋಪ

Views: 4

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ  ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ಸುಜ್ಞಾನ ಪಿ.ಯು. ಕಾಲೇಜು, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಜಂಟಿ ಆಶ್ರಯದಲ್ಲಿ ನಡೆದ ‘ಮಂಥನ 2026’ ಬೇಸಗೆ ಶಿಬಿರದ ಸಮಾರೋಪ ನಡೆಯಿತು.

‘ಮಂಥನ’ ಬೇಸಗೆ ಶಿಬಿರ ಸಮಾರೋಪದಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡಿ, ಉತ್ತಮ ಗುಣಮ ಟ್ಟದ ಶಿಕ್ಷಣಕ್ಕೆ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವ ಬೇಸಿಗೆ ಶಿಬಿರ ಅದ್ಭುತ ಯಶಸ್ಸು ಕಂಡಿದೆ ಎಂದರು.ಇಡೀ ರಾಜ್ಯದಲ್ಲಿ ಕುಂದಾಪುರದಲ್ಲಿ ಸುಜ್ಞಾನ ವಿದ್ಯಾಸಂಸ್ಥೆಗೆ ಹೆಚ್ಚು ಬೇಡಿಕೆಯಿಂದ ವಿದ್ಯಾರ್ಥಿಗಳು ರಾಜ್ಯದ ಮೂಲೆ ಮೂಲೆಗಳಿಂದಲೂ ಬರುತ್ತಿದ್ದಾರೆ.ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಕುಂದಗನ್ನಡ ಅಧ್ಯಯನ ಪೀಠದ ಸದಸ್ಯ ಕೆ.ಸಿ. ರಾಜೇಶ್ ಕುಂದಾಪುರ ಅವರು ಮಾತನಾಡಿ, ‘ಮಂಥನ’ ಎನ್ನುವ ಹೆಸರೇ ಅಭಿವೃದ್ಧಿಯ ಸಂಕೇತ. ಇದು ನಿಜವಾಗಿಯೂ ರಾಷ್ಟ್ರಮಟ್ಟದ ಶಿಬಿರವಾಗಿದೆ ಎಂದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ ಶೆಟ್ಟಿ ಕಾಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಅವರು ಶುಭಹಾರೈಸಿದರು.ಮುಖ್ಯೋಪಾಧ್ಯಾಯ ಪ್ರದೀಪ ಕೆ. ಮತ್ತಿತರರು ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಾದ ಶ್ರೀಯಾ ಎಸ್. ಕಾಂಚನ್, ಸಾನಿಧ್ಯ, ಪ್ರಣಿತ ಕೇಶವ, ಅವನಿ ಹಾಗೂ ಮಕ್ಕಳ ಪೋಷಕರಾದ ಸುರೇಂದ್ರ ರಾವ್ ಕುಂದಾಪುರ ರಾಘವೇಂದ್ರ ಶೇಟ್, ರೇಖಾಕುಲಾಲ್, ಅಶೋಕ್ ತೆಕ್ಕಟ್ಟೆ ರಾಧಾ, ಆಜಾದ್ ಮೊಹಮದ್ ಬ್ರಹ್ಮಾವರ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಥನ ಚಿನಕುರುಳಿ ಪ್ರಶಸ್ತಿ ಸೇರಿದಂತೆ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಮನೋಜ್ ನಿರೂಪಿಸಿ, ಶಿಕ್ಷಕಿ ವೈಷ್ಣವಿ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿ, ಶಿಕ್ಷಕ ರಜತ್ ಭಟ್ ವಂದಿಸಿದರು.

Related Articles

Back to top button
error: Content is protected !!