ಇತರೆ

ಕಾಲ್ತೋಡಿನಲ್ಲಿ ಕಲ್ಲು ಕ್ವಾರೆಗೆ ಬಿದ್ದು ಸಾವು: ಪತಿಯ ಸಾವಿನ ಬಗ್ಗೆ ಪತ್ನಿ ಸಂಶಯ!

Views: 18

ಕನ್ನಡ ಕರಾವಳಿ ಸುದ್ದಿ: ಕೆಂಪು ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಕಾಲ್ತೋಡು ಬೊಳ್ಳಂಬಳ್ಳಿಯಲ್ಲಿ ಸಂಭವಿಸಿದೆ.

ಹೇರಂಜಾಲು ಗ್ರಾಮದ ಶಿವಾನಂದ ದೇವಾಡಿಗ (49) ಮೃತಪಟ್ಟ ದುರ್ದೈವಿ.ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಶಿವಾನಂದ ಅವರು ಜು.26 ರಂದು ಬೆಳಿಗ್ಗೆ ಕಾಲ್ಲೋಡು ಬೆಳ್ಳಂಬಳ್ಳಿಯಲ್ಲಿರುವ ಕೆಂಪು ಕಲ್ಲು ಕ್ವಾರೆ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುತ್ತಿದ್ದ ಸಮಯದಲ್ಲಿ ಅವರಿಗೆ ದಿಢೀರ್ ತಲೆತಿರುಗಿ ಬಿದ್ದಿದ್ದರಿಂದ ಗಾಯಗೊಂಡಿದ್ದರು ಎನ್ನಲಾಗಿದೆ. ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪತ್ನಿ, ಮೃತರ ತಲೆಯ ಭಾಗದಲ್ಲಿದ್ದ ಗಾಯವನ್ನು ಕಂಡು ಪತಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ನೀಡಿದ ದೂರಿನನ್ವಯ ಬೈಂದೂರು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!