ಸಾಂಸ್ಕೃತಿಕ

ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀಗೆ ವಿಶ್ವಸುಂದರಿ ಕಿರೀಟ 

Views: 94

ಕನ್ನಡ ಕರಾವಳಿ ಸುದ್ದಿ: ಹೈದರಾಬಾದ್ ನಲ್ಲಿ ನಡೆದ 72ನೇ ‘ಮಿಸ್ ವರ್ಲ್ಡ್ 2025’ ಫೈನಲ್ ಸ್ಪರ್ಧೆಯಲ್ಲಿ ವಿಶ್ವ ಸುಂದರಿ ಕಿರೀಟ ಥಾಯ್ಲೆಂಡ್ ಸುಂದರಿಯ ಪಾಲಾಯಿತು.ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ವಿಶ್ವಸುಂದರಿಯಾಗಿ ಕಿರೀಟ ಮುಡಿಗೇರಿಸಿಕೊಂಡವರು.

ಹಾಲಿ ಮಿಸ್ ವರ್ಲ್ಡ್ ಕ್ರಿಸ್ಟಿನಾ ಪಿಜ್ಕೋವಾ ಅವರು ಥಾಯ್ಲೆಂಡ್ ವಿಶ್ವ ಸುಂದರಿಗೆ ಕಿರೀಟ ಧಾರಣೆ ಮಾಡಿದರು.

ಹೈದರಾಬಾದ್ನಲ್ಲಿ ಶನಿವಾರ ಸಂಜೆ ನಡೆದ ಫೈನಲ್ ಸ್ಪರ್ಧೆಯಲ್ಲಿ ಥಾಯ್ಲೆಂಡ್ ದೇಶದ ಒಪಾಲ್ ಸುಚಾತಾ ಚೌಂಗಶ್ರೀ  ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಸ್ಪರ್ಧೆಯಲ್ಲಿ ವಿಜೇತರಿಗೆ 8 ಕೋಟಿ ರೂ ಬೆಲೆಯ ವಜ್ರದ ಕಿರೀಟವನ್ನು ಧರಿಸಲಾಗಿತು.

ಇಥಿಯೋಪಿಯಾದ ಸುಂದರಿ ಮೊದಲ ರನ್ನರ್ ಅಪ್ ಆದರು. ಪೊಲ್ಯಾಂಡ್ ಸುಂದರಿ ಮತ್ತು ಕೆರೆಬಿಯನ್ ಸುಂದರಿ ಕ್ರಮವಾಗಿ ಎರಡು ಮತ್ತು ಮೂರನೇ ರನ್ನರ್ ಅಪ್ ಆದರು.

ವಿಶ್ವ ಸುಂದರಿ ಸ್ಪರ್ಧೆಯಿಂದ ಮಿಸ್‌ ಇಂಡಿಯಾ ನಂದಿನಿ ಗುಪ್ತಾ ಎಲಿಮಿನೆಟ್‌: ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜಸ್ಥಾನದ ಕೋಟಾ ಮೂಲದ ನಂದಿನಿ ಗುಪ್ತಾ ಸೆಮಿಫೈನಲಿಸ್ಟ್ ಆಗಿ ಅರ್ಹತೆ ಪಡೆದಿದ್ದರು. ಆದರೆ ಬಳಿಕ ಟಾಪ್ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು.

ಟಾಪ್ 8ರಲ್ಲಿ ಮಾರ್ಟಿನಿಕ್, ಬ್ರೆಜಿಲ್, ಇಥಿಯೋಪಿಯಾ, ನಮೀಬಿಯಾ, ಪೋಲೆಂಡ್, ಉಕ್ರೇನ್, ಫಿಲಿಪ್ಪೀನ್ಸ್, ಥಾಯ್ಲೆಂಡ್ ದೇಶಗಳ ಸುಂದರಿಯರಿದ್ದರು.

ಕಾರ್ಯಕ್ರಮ ಮುಗಿದ ನಂತರ, ಮಿಸ್ ವರ್ಲ್ಡ್ ತೀರ್ಪುಗಾರರು ಮತ್ತು ರಾಯಭಾರಿ ಸುಧಾ ರೆಡ್ಡಿ ಮಾತನಾಡಿ, “ಸ್ಪರ್ಧಿಗಳು ಶಾರ್ಟ್‌ಲಿಸ್ಟ್ ಆಗುತ್ತಿದ್ದಂತೆ, ಥೈಲ್ಯಾಂಡ್ ಸುಂದರಿ ಕಿರೀಟವನ್ನು ಗೆಲ್ಲುತ್ತಾರೆ ಎಂದು ನನಗೆ ಖಚಿತವಾಗಿತ್ತು. ಅವರು ತಮ್ಮ ಮಾತಿನ ಬಗ್ಗೆ ತುಂಬಾ ಸ್ಪಷ್ಟವಾಗಿದ್ದರು ಮತ್ತು ಆಕರ್ಷಕ ಮುಖವನ್ನು ಹೊಂದಿದ್ದಾರೆ. ಸೌಂದರ್ಯ ಸ್ಪರ್ಧೆಗಳು ಸೌಂದರ್ಯದ ಬಗ್ಗೆ ಮಾತ್ರವಲ್ಲ, ಇದು ವ್ಯಕ್ತಿಯ ಒಟ್ಟಾರೆ ವ್ಯಕ್ತಿತ್ವ ಮತ್ತು ಒಂದು ಉದ್ದೇಶದ ಕಡೆಗೆ ಅವರ ಸಮರ್ಪಣೆಯ ಬಗ್ಗೆಯೂ ಇರುತ್ತದೆ” ಎಂದರು.

 

 

Related Articles

Back to top button