ಶಿಕ್ಷಣ

SSLC ಪರೀಕ್ಷೆ ಬರೆಯುತ್ತಿದ್ದ ಕೊಠಡಿ ಮೇಲ್ವೀಚಾರಕರಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲು!

Views: 130

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ  ಪರೀಕ್ಷೆಗಳು ನಡೆಯುತ್ತಿದ್ದು, ಇನ್ನೇನೊ ಮುಕ್ತಾಯದ ಹಂತದಲ್ಲಿದೆ. ಈ ಸಂದರ್ಭದಲ್ಲೇ ಪರೀಕ್ಷಾ ಕೊಠಡಿಯಲ್ಲೇ ಅನಾಹುತ ನಡೆದು ಹೋಗಿದೆ. SSLC ಪರೀಕ್ಷೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಶಿಕ್ಷಕರೊಬ್ಬರಿಗೆ ತರಗತಿಯ ಒಳಗಿದ್ದ ಹಾವೊಂದು ಕಚ್ಚಿ ಬಳಿಕ ಆಸ್ಪತ್ರೆಗೆ ದಾಖಲಾದ ಘಟನೆ ಆಂದ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಚಿಲಕಲೂರಿಪೇಟೆಯ ವೇದ ಪಾಠಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮುಖ್ಯ ಶಿಕ್ಷಕ ಕರೀಮುಲ್ಲಾ ಅವರಿಗೆ ಹಾವು ಕಚ್ಚಿದೆ.

ಪರೀಕ್ಷೆ ಬರೆಯುತ್ತಿದ್ದ ಮಕ್ಕಳ ಹಾಲ್ ಟಿಕೇಟ್ ಚೆಕ್ ಮಾಡಲು ಶಿಕ್ಷಕ ಕೊಠಡಿಯ ಒಳಗೆ ಬಂದಿದ್ದರು. ಈ ಸಂದರ್ಭದಲ್ಲಿ ಹಾವೊಂದು ಕೊಠಡಿ ಒಳಗೆ ಕಾಣಿಸಿಕೊಂಡಿದೆ. ಅದನ್ನು ಹೊರಹಾಕಲೆಂದು ಪ್ರಯತ್ನಿಸುತ್ತಿದ್ದಾಗ ಹಾವು ಬಂದು ಅಧಿಕಾರಿಯ ಕೈಗೆ ಕಚ್ಚಿದೆ.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆತರಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಕರೀಮುಲ್ಲಾ ಅವರು ಹುಷಾರಾಗಿ ಇದ್ದಾರೆ. ವಿಷಕಾರಿ ಹಾವು ಕಚ್ಚಿದ್ದಲ್ಲ. ಹೀಗಾಗಿ 3 ದಿನದಲ್ಲಿ ಡಿಸ್ಟಾರ್ಜ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಪರೀಕ್ಷಾ ಕೊಠಡಿಯ ಒಳಗೆ ಹಾವು ಕಂಡು ಬಂದಿದ್ದರಿಂದ ವಿದ್ಯಾರ್ಥಿಗಳು-ಪೋಷಕರು ಭಯಭೀತರಾಗಿದ್ದಾರೆ. ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೋಚಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Related Articles

Back to top button