ಇತರೆ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಿನ್ನಾಭರಣ ಕಳವು: ಕೇವಲ ಎರಡೇ ಗಂಟೆಗಳಲ್ಲಿ ಪತ್ತೆಹಚ್ಚಿದ ಪೊಲೀಸರು
Views: 117
ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆಯೊಬ್ಬರು ಚಿನ್ನ ಕಳುವಾಗಿದ್ದು ಇದನ್ನು ಕೇವಲ ಎರಡೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಕೊಲ್ಲೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲ್ಲೂರು ದೇವಸ್ಥಾನದಲ್ಲಿ ಕೇರಳದ ಭಕ್ತೆಯೊಬ್ಬರ ಎರಡು ಚಿನ್ನದ ಸರ ಮತ್ತು ನಗದು ಇದ್ದ ಪರ್ಸ್ ಕಳುವಾಗಿತ್ತು. ಇದನ್ನು ಕೂಡಲೇ ಗಮನಿಸಿದ ಭಕ್ತೆ ತಕ್ಷಣ ಅಲ್ಲಿದ್ದ ಅಧಿಕಾರಿಗಳ ಗಮನಕ್ಕೆ ತಂದರು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೇವಲ ಎರಡು ಗಂಟೆಗಳಲ್ಲಿ ಕಳುವಾದ ಚಿನ್ನವನ್ನು ಪತ್ತೆಹಚ್ಚಿ, ಬಳಿಕ ಕೇರಳದ ಭಕ್ತೆಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು.






