ಆರೋಗ್ಯ

ಗುತ್ತಿಗೆ ಶುಶ್ರೂಷಾಧಿಕಾರಿಗಳ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣೆ

Views: 50

ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ಅನಿರ್ಧಿಷ್ಟಾವಧಿವರೆಗೆ ಅಹೋರಾತ್ರಿ ಧರಣೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿದೆ.

ಏನಿದು ಬೇಡಿಕೆ?

ರಾಷ್ಟ್ರೀಯ ಆರೋಗ್ಯ ಅಭಿಯಾನದ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಖಾಯಂ ನೌಕರರಷ್ಟೇ ಇಲಾಖೆಯು ವಹಿಸಿದ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದೇವೆ.

ಕೋವಿಡ್ 19 ಸಂದರ್ಭದಲ್ಲೂ ಹೆಣ್ಣು ಮಕ್ಕಳೇ ಹೆಚ್ಚಾಗಿರುವ ನಾವು ನಮ್ಮ ಕುಟುಂಬವನ್ನು ಬಿಟ್ಟು ಜೀವದ ಹಂಗು ತೊರೆದು ಹಗಲಿರುಳೆನ್ನದೇ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದೇವೆ.

ಅಲ್ಪ ವೇತನದಲ್ಲಿ ಇನ್ನಿತರ ಯಾವುದೇ ಸೌಲಭ್ಯಗಳಿಲ್ಲದೇ ಕೌಟುಂಬಿಕ ಜೀವನ ನಿರ್ವಹಣೆ ಕಷ್ಟಕರವಾಗಿರುವ ಈ ಕಾಲಘಟ್ಟದಲ್ಲಿ ಈಗಾಗಲೇ ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಅಹವಾಲುಗಳನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ 24.02.2025 ರಿಂದ ಅನಿವಾರ್ಯವಾಗಿ ಬೆಂಗಳೂರಿನ ಈ ಸ್ವಾತಂತ್ರ್ಯ ಉದ್ಯಾನವನದಲ್ಲಿ “ಅನಿರ್ಧಿಷ್ಟಾವಧಿವರೆಗೆ ಅಹೋರಾತ್ರಿ ಧರಣೆ” ಯನ್ನು ನಡೆಸುತ್ತಿದ್ದೇವೆ. ಈಗಲಾದರೂ ಘನ ಸರ್ಕಾರ ನಮ್ಮ ಸೇವೆಯನ್ನು ಗುರುತಿಸಿ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಧರಣಿ ನಡೆಸುತ್ತಿದ್ದಾರೆ.

ಪ್ರಮುಖ ಬೇಡಿಕೆಗಳು

ಮುಂಬರುವ “ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ” ಮೇಲೆ ಕೃಪಾಂಕ ಮತ್ತು ವಯೋಮತಿ ಸಡಿಲಿಕೆ ನೀಡಬೇಕು ನಮಗೂ ವರ್ಷದ ಗುತ್ತಿಗೆ ಸೇವೆಗೆ ಕೃಪಾಂಕದಂತೆ ಗರಿಷ್ಠ 3 ಕೃಪಾಂಕ ನೀಡಬೇಕು.

ಜಿಲ್ಲೆ ಯಿಂದ ಜಿಲ್ಲೆಗೆ ವರ್ಗಾವಣೆ ನೀಡಬೇಕು

ಇಲ್ಲಿಯವರೆಗೂ 2 ವರ್ಷಗಳಿಂದ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಕೊಡಲು ಹಲವಾರು ಮಾಡಿಕೊಡುವುದಾಗಿ ಹೇಳುವುದೇ ಆಯಿತು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಮಾಡಿರುವ ಶುಶ್ರುಷಾಧಿಕಾರಿಗಳ ಆ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಬೇಕು ಈಗಾಗಲೇ ಆದೇಶ ಹೊರಡಿಸಿದ್ದಾರೆ ಆದರೆ ಜಾರಿಗೆ ಆಗಿಲ್ಲ.

ನಾವು ಸರ್ಕಾರಕ್ಕೆ ಹಾಗೂ ಸಾಮಾನ್ಯ ಜನರಿಗೆ ಸೇವೆ ಮಾಡುವಲ್ಲಿ ತೊಂದರೆ ಕೊಡಲು ಇಚ್ಛಿಸುವುದಿಲ್ಲ ಆದರೆ ನಮ್ಮ ಎಲ್ಲಾ ಸೌಲಭ್ಯಗಳಿಂದಲೂ ಕಡೆಗಣಿಸಿರುವುದರಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ನಾವು ಈ ಮುಷ್ಕರವನ್ನು ಮಾಡುವುದು

ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಅತೀ ಶೀಘ್ರದಲ್ಲಿ ಈಡೇರಿಸುವಂತೆ  ಅನಿರ್ಧಿಷ್ಟಾವಧಿವರೆಗೆ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.

Related Articles

Back to top button