ಉಡುಪಿ: ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ, ಹೈ ಅಲರ್ಟ್!

Views: 116
ಕನ್ನಡ ಕರಾವಳಿ ಸುದ್ದಿ:ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೂ ಈ ಬಾಂಬರ್‌ಗಳ ಕಣ್ಣು ಬಿದ್ದಿತ್ತು. ಅಲ್ಲದೇ ಶಾಲಾ- ಕಾಲೇಜುಗಳ ಮೇಲೂ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ಈ ಮಧ್ಯೆ ಬಾಂಬರ್‌ಗಳ ಕಣ್ಣು ರಾಜ್ಯಕ್ಕೂ ಬಿದ್ದಿದೆ. ಇದೀಗ ಉಡುಪಿ ಮತ್ತು ಮಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ಉಡುಪಿ ಕುಂಜಿಬೆಟ್ಟುವಿನ ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಾಲಾ ಕಟ್ಟಡವನ್ನು ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ.
ಉಡುಪಿ ಶಾರದಾ ರೆಸಿಡೆನ್ಸಿಯಲ್ ಶಾಲೆಯ ಇಮೇಲ್ ಗೆ ಬಾಂಬ್ ಸ್ಪೋಟದ ಸಂದೇಶ ಬಂದಿದ್ದು, ಇದನ್ನು ಗಮನಿಸಿದ ಶಾಲೆಯವರು ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಮೈದಾನದಲ್ಲಿ ಇರಿಸಿದ್ದಾರೆ.
ಬಾಂಬ್ ಸ್ಫೋಟದ ಬೆದರಿಕೆ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಅಲರ್ಟ್ ಆಗಿದ್ದು ಸ್ಥಳಕ್ಕೆ ಆಗಮಿಸಿ ಶ್ವಾನ ದಳದೊಂದಿಗೆ ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಿದರು. ಆದರೆ ಬಾಂಬೆಗೆ ಸಂಬಂಧಪಟ್ಟ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಸುಮಾರು 600ಕ್ಕೂ ಅಧಿಕ ಮಕ್ಕಳು ಒದುತ್ತಿದ್ದು ಇವರನ್ನೆಲ್ಲ ಶಾಲೆಯ ಮೈದಾನಕ್ಕೆ ಕಳುಹಿಸಲಾಗಿದೆ.ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.