ಸಾಸ್ತಾನ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘ 21ನೇ ವಾರ್ಷಿಕ ಮಹಾಸಭೆ

Views: 250
ಕನ್ನಡ ಕರಾವಳಿ ಸುದ್ದಿ: ಸಾಸ್ತಾನ ವಲಯ ಪದ್ಮಶಾಲಿ ಸಮಾಜ ಸೇವಾ ಸಂಘ 21ನೇ ವಾರ್ಷಿಕ ಮಹಾಸಭೆ ನ.27 ರಂದು ಸಂಘದ ಅಧ್ಯಕ್ಷರಾದ ಭಾಸ್ಕರ ಶೆಟ್ಟಿಗಾರ ಸಾಸ್ತಾನ ಇವರ ಅಧ್ಯಕ್ಷತೆಯಲ್ಲಿ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಜರುಗಿತು.
ಅಂದು ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಡಾ. ಜಯರಾಮ್ ಶೆಟ್ಟಿಗಾರ್ ಅವರು ಮಾತನಾಡಿ, ಪ್ರತಿಯೊಂದು ಸಮಾಜದಲ್ಲಿ ಕೂಡ ಸಾಮಾಜಿಕ ಸಂಘಟನೆಗಳು ಬೇಕಾಗಿದ್ದು, ಆರ್ಥಿಕವಾಗಿ ಮುಂದುವರಿದ ಕುಟುಂಬಗಳು ಬಡ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದಾಗ ಇಡೀ ಸಮಾಜದ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಇಡೀ ದೇಶದ ಪ್ರಗತಿ ಸಾಧ್ಯ ವಾಗುತ್ತದೆ. ಅಲ್ಲದೆ ಹೊಸ ತಲೆಮಾರಿದ ಮಕ್ಕಳು ಸಮಾಜಮುಖಿಯಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿಗಾರ್, ಶ್ರೀ ಸುರೇಶ್ ಶೆಟ್ಟಿಗಾರ್, ಆಡಳಿತ ಮೋಕ್ತೇಸರರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿ, ಶ್ರೀ ವಿದ್ಯಾಧರ ಶೆಟ್ಟಿಗಾರ್ ಮಂಗಳೂರು ನಿವೃತ್ತ ಎಜಿಎಮ್ ಬಾರತೀಯ ಸ್ಟೇಟ್ ಬ್ಯಾಂಕ್, ಶ್ರೀ ಭಾಸ್ಕರ ಶೆಟ್ಟಿಗಾರ್ ಕಿನ್ನಿಗೋಳಿ ನಿವೃತ್ತ ವ್ಯವಸ್ಥಾಪಕರು ಬಾರತೀಯ ಸ್ಟೇಟ್ ಬ್ಯಾಂಕ್, ಡಾ. ಪದ್ಮನಾಭ ಶೆಟ್ಟಿಗಾರ್ ಪಡುಬಿದ್ರೆ ಇವರು ಭಾಗವಹಿಸಿದ್ದರು.
ಸಂಘದ ಗೌರವಾಧ್ಯಕ್ಷರಾದ ಶ್ರೀ ವಿಠ್ಠಲ ಶೆಟ್ಟಿಗಾರ್ ಇಂದ್ರಾಳಿ(ನಿವೃತ್ತ ಎಜಿಎಮ್ ಬಾರತೀಯ ಸ್ಟೇಟ್ ಬ್ಯಾಂಕ್) ಇವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಶ್ರೀ ಶ್ರೀನಿವಾಸ್ ಶೆಟ್ಟಿಗಾರ್ ಗುಂಡ್ಮಿ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಶ್ರೀ ವಿಠ್ಠಲ ಶೆಟ್ಟಿಗಾರ್ ಎಮ್‌ಐಟಿ ಗುಂಡ್ಮಿ ಇವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಶ್ರೀಮತಿ ಪ್ರಿಯದರ್ಶಿನಿ ಹರ್ಷೇಂದ್ರಕುಮಾರ್ ಸಂದೇಶ ವಾಚಿಸಿದರು. ಶ್ರೀಮತಿ ಶಾಂತ ಸಂಜೀವ ಶೆಟ್ಟಿಗಾರ್ ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ವಿದ್ಯಾರ್ಥಿವೇತನ ಕಾರ್ಯಕ್ರಮ ನಡೆಸಿಕೊಟ್ಟರು. ಶೇ.85 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ 3 ವಿದ್ಯಾರ್ಥಿಗಳಿಗೆ ತಲಾ 15,000/ರೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 28 ವಿದ್ಯಾರ್ಥಿಗಳಿಗೆ ತಲಾ 1000/ ವಿದ್ಯಾರ್ಥಿವೇತನ ವಿತರಿಸಲಾಯಿತು. ಈ ವರ್ಷ ಇಂಜಿನಿಯರಿಂಗ್ ವಿದ್ಯಾಬ್ಯಾಸಕ್ಕೆ ಸೇರಿರುವ 3 ವಿದ್ಯಾರ್ಥಿಗಳಿಗೆ ತಲಾ 5000/ ರೂ ವಿಶೇಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮ್ಯಾರಥಾನ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಶ್ರೀ ವಿಠ್ಠಲ ಶೆಟ್ಟಿಗಾರ್ ಇವರನ್ನು ಗೌರವಿಸಲಾಯಿತು. ನೇಕಾರಿಕೆ ವೃತ್ತಿಯನ್ನು ಮುಂದುವರಿಸುತ್ತಿರುವ ಶ್ರೀ ಲಕ್ಷ್ಮಣ ಶೆಟ್ಟಿಗಾರ್ ಗುಂಡ್ಮಿ, ಹಿರಿಯರಾದ ಶ್ರೀ ಮಾಲಿಂಗ ಶೆಟ್ಟಿಗಾರ್ ಗುಂಡ್ಮಿ ,ಶ್ರೀಮತಿ ಪಾರ್ವತಿ ಶೆಟ್ಟಿಗಾರ್ ಗುಂಡ್ಮಿ, ರಂಗೋಲಿ, ಚಿತ್ರಕಲೆ, ಮಡಿಕೆ ಒಡೆಯುವ ಸ್ಪರ್ಧೆ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ, ಬಾಡ್ಮಿಂಟನ್ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯತು.
ಶ್ರೀ ಜಯಕುಮಾರ್ ಸಾಪ್ಟ್ವೇರ್ ಇಂಜಿನಿಯರ್ ಅಮೇರಿಕಾ ಇವರು ಈ ವರೆಗೆ ಸಾಸ್ತಾನ ವಲಯದ ವಿಧ್ಯಾರ್ಥಿಗಳಿಗೆ 10ಲಕ್ಷಕ್ಕೂ ಹೆಚ್ಚು ಮೊತ್ತವನ್ನು ವಿದ್ಯಾರ್ಥಿ ವೇತನವಾಗಿ ನೀಡಿದ್ದು, ಈ ವರ್ಷವೂ 8 ವಿದ್ಯಾರ್ಥಿಗಳನ್ನು ವಿಶೇಷ ವಿದ್ಯಾರ್ಥಿ ವೇತನಕ್ಕೆ ಆಯ್ಕೆಮಾಡಿರುವುದಾಗಿ ಗೌರವಾಧ್ಯಕ್ಷರಾದ ಶ್ರೀ ವಿಠ್ಠಲ ಶೆಟ್ಟಿಗಾರ್ ಇಂದ್ರಾಳಿ ಇವರು ತಿಳಿಸಿದರು. ಸಭೆಯಲ್ಲಿ ಶ್ರೀ ವಿಠ್ಠಲ ಶೆಟ್ಟಿಗಾರ್ ಇಂದ್ರಾಳಿ ಇವರ ಪುತ್ರ ಶ್ರೀ ಸುದೀರ್ ಕೃಷ್ಣ ಮತ್ತು ಅವರ ಪತ್ನಿ ಶ್ರೀಮತಿ ಮಿನಾಲ್ ಶೆಟ್ಟಿಗಾರ್ ಅಮೇರಿಕಾ ಇವರು ಸಂಘದ ಭಜನಾ ತಂಡಕ್ಕೆ 18,೦೦೦ ರೂ. ಮೌಲ್ಯದ ಸಮವಸ್ತ್ರ ವಿತರಿಸಿದ್ದು, ದಂಪತಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಶ್ರೀ ಪ್ರಕಾಶ್ ಶೆಟ್ಟಿಗಾರ್ ಇವರು ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟಿದ್ದು, ಹಿಂದಿನ ಪದಾಧಿಕಾರಿಗಳು ಮುಂದಿನ ಅವಧಿಗೆ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ. ನಂತರ ಮಹಾಸಭೆಯ ಊಟೋಪಚಾರದ ಪ್ರಾಯೋಜಕರಾದ ಶ್ರೀಮತಿ ಸಂಧ್ಯಾ ಮತ್ತು ಶ್ರೀ ವಿಠ್ಠಲ ಶೆಟ್ಟಿಗಾರ್ ಸಗ್ರಿ ಉಡುಪಿ ಇವರನ್ನು ಸನ್ಮಾನಿಸಲಾಯಿತು. ಸಂಘಕ್ಕೆ ಕಳೆದ 19 ವರ್ಷಗಳಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ನೀಡುತ್ತಿರುವ ಶ್ರೀಮತಿ ಪ್ರೇಮಾ ಮತ್ತು ಶ್ರೀ ಮಾಧವ ಶೆಟ್ಟಿಗಾರ್ ಬೆಂಗಳೂರು ಇವರನ್ನು ಗೌರವಿಸಲಾಯಿತು. ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿ ಧನ್ಯವಾದ ಸಮರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿರುತ್ತದೆ. ಮದ್ಯಾಹ್ನ ಸಮಾಜ ಬಾಂದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.