ಶಿಕ್ಷಣ

25 ವರ್ಷದ ಯುವತಿ ಜತೆಗೆ ಅಶ್ಲೀಲ ವಿಡಿಯೋ ನಮ್ಮ ಬಳಿ ಎಂದು ಹೇಳಿ ನಿವೃತ್ತ ಎಂಜಿನಿಯರ್‌ಗೆ 2 ಕೋಟಿ ಸುಲಿಗೆ 

Views: 76

ಕನ್ನಡ ಕರಾವಳಿ ಸುದ್ದಿ: ನಿವೃತ್ತ ಎಂಜಿನಿಯ‌ರ್ ಒಬ್ಬರಿಗೆ ತಿರುಚಿದ ವಿಡಿಯೋ ತೋರಿಸಿ ₹2 ಕೋಟಿ ಸುಲಿಗೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಮೂಲದ ಅಜಯ್ ಮತ್ತು ಅಭಿ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ನಿವೃತ್ತ ಎಂಜಿನಿಯರ್‌ಗೆ ಕರೆ ಮಾಡಿದ್ದ ಆರೋಪಿ ಅಜಯ್, ನೀವು 25 ವರ್ಷದ ಯುವತಿ ಜತೆಗೆ ಇರುವ ಅಶ್ಲೀಲ ವಿಡಿಯೋಗಳು ನಮ್ಮ ಬಳಿ ಇವೆ. ಈ ವಿಡಿಯೋಗಳನ್ನು ಡಿಲೀಟ್‌ ಮಾಡಲು ₹2 ಕೋಟಿ ನೀಡಬೇಕು ಎಂದು ಬೆದರಿಸಿದ್ದಾರೆ.

ಮಾ.16ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿಗಳು ₹2 ಕೋಟಿ ನೀಡಬೇಕು. ಇಲ್ಲವಾದರೆ, ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಆರೋಪಿಗಳ ಕಾಟ ತಾಳಲಾರದೆ ನಿವೃತ್ತ ಎಂಜಿನಿಯ‌ರ್ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Back to top button