ಜನಮನ

ಹೊಸ ವರ್ಷಕ್ಕೆ ಗುಡ್‌ನ್ಯೂಸ್!! :LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ 

Views: 223

ನವದೆಹಲಿ: ಹೊಸ ವರ್ಷದ ಮೊದಲ ದಿನ ಜನಸಾಮಾನ್ಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಎಲ್‌ಪಿಜಿ ಸಿಲಿಂಡರ್ ರೀಫಿಲ್ಲಿಂಗ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಅನ್ವಯವಾಗಲಿವೆ. ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಜನವರಿರ 1ರಿಂದ 14.50 ರೂ ಇಳಿಕೆ ಮಾಡಿವೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1818.50 ರೂ.ನಿಂದ 1804 ರೂ.ಗೆ ಕಡಿಮೆಯಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪರಿಷ್ಕರಣೆ ಮಾಡುತ್ತವೆ. ಹೊಸ ದರಗಳು ತಿಂಗಳ ಮೊದಲ ದಿನದಿಂದಲೇ ಅನ್ವಯವಾಗುತ್ತವೆ. ಜನವರಿಯಲ್ಲಿಯೂ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಹೊಸ ಬೆಲೆಯನ್ನು ಪ್ರಕಟಿಸಿವೆ. ಇಂದಿನಿಂದ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1927 ರೂ.ಗಳಿಂದ 1911 ರೂ.ಗೆ ಇಳಿಕೆಯಾಗಿದೆ. ಮುಂಬೈನಲ್ಲಿ 1771 ರೂ.ಗಳಿಂದ 1756 ರೂ.ಗೆ ಇಳಿದಿದೆ. ಚೆನ್ನೈನಲ್ಲಿ 1980.50 ರೂ.ಗಳಿಂದ 1980.50. ರೂ.ಗೆ ಕಡಿಮೆಯಾಗಿದೆ.

Related Articles

Back to top button
error: Content is protected !!