ಯುವಜನ
ಹೆಬ್ರಿ:ತಮ್ಮನನ್ನು ಶಾಲೆಗೆ ಬಿಟ್ಟುಬರಲು ತೆರಳುತ್ತಿದ್ದಾಗ ಬೈಕ್ ಜೆಸಿಬಿಗೆ ಡಿಕ್ಕಿ: ಬೈಕ್ ಸವಾರ ಅಣ್ಣ ಸಾವು

Views: 271
ಕಾರ್ಕಳ : ತಮ್ಮನನ್ನು ಶಾಲೆಗೆ ಬಿಟ್ಟುಬರಲು ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ ಜೆಸಿಬಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅಣ್ಣ ಮೃತಪಟ್ಟು ತಮ್ಮ ಗಂಭೀರ ಗಾಯಗೊಂಡ ಘಟನೆ ಕಾರ್ಕಳ ಹೆಬ್ರಿಯ ಶಿವಪುರದಲ್ಲಿ ಶುಕ್ರವಾರ ಸಂಭವಿಸಿದೆ.
ಇಲ್ಲಿನ ನಾಯರ್ಕೋಡು ನಿವಾಸಿ ಪ್ರತ್ಯಕ್ಷ್ ಶೆಟ್ಟಿ (21) ಮೃತಪಟ್ಟ ಬೈಕ್ ಸವಾರ
ಪ್ರತ್ಯಕ್ಷ್ ತಮ್ಮನನ್ನು ಶಾಲೆಗೆ ಬಿಡಲು ಹೊಗುತ್ತಿದ್ದ ಸಂದರ್ಭ ಪೆರ್ಡೂರು ಗ್ರಾಮದ ನಾಯರ್ಕೋಡ್ನಲ್ಲಿ ಜೆಸಿಬಿಗೆ ಪ್ರತ್ಯಕ್ಷ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಪ್ರತ್ಯಕ್ಷ್ ಮೃತಪಟ್ಟಿದ್ದಾರೆ.
ಬೈಕಿನಲ್ಲಿದ್ದ ಪ್ರತ್ಯಕ್ಷ್ ಅವರ ಸಹೋದರ ಪ್ರಿತೇಶ್ ಕೂಡ ಗಾಯಗೊಂಡಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.






