ಸುರತ್ನಲ್: ಅನ್ಯಕೋಮಿನ ಯುವಕನನ್ನು ಮದುವೆಯಾದ ವಿದ್ಯಾರ್ಥಿನಿ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆ!
Views: 81
ಕನ್ನಡ ಕರಾವಳಿ ಸುದ್ದಿ: ಸುರತ್ಕಲ್‌ನ ಮುಕ್ಕದಲ್ಲಿ ಕ್ರಿಮಿನಾಲಜಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳು ಅನ್ಯಕೋಮಿನ ಯುವಕನನ್ನು ಮದುವೆಯಾಗಿ, ಇದೀಗ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಕಾಸರಗೋಡು ಜಿಲ್ಲೆಯ ಆರ್.ಡಿ. ನಗರದ ನಿವಾಸಿ ವೈಶಾಲಿ (23) ನಾಪತ್ತೆಯಾದ ಯುವತಿ.
ಈಕೆ ಸುರತ್ಕಲ್‌ನ ಕಾನಾದಲ್ಲಿರುವ ಪಿಜಿಯೊಂದರಲ್ಲಿ ಉಳಿದುಕೊಂಡು, ಜನವರಿಯಿಂದ ಖಾಸಗಿ ಕಂಪನಿಯೊಂದರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು
ಜನವರಿ 31ರಂದು ವೈಶಾಲಿ ಅವರು ಕೇರಳದ ವಯನಾಡ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೊಹಮ್ಮದ್ ಮಿದ್ಲಾಜ್ ಎಂಬ ಯುವಕನೊಂದಿಗೆ ರಿಜಿಸ್ಟರ್ಡ್ ವಿವಾಹ ಆಗಿರುವ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶವನ್ನು ವೈಶಾಲಿಯ ಸಂಬಂಧಿ ಹರಿದಾಸ್ ಅವರು ಫೆ. 7ರಂದು ಹೆತ್ತವರಿಗೆ ಕಳುಹಿಸಿಕೊಟ್ಟಿದ್ದರು.
ವಿಷಯ ತಿಳಿದ ಪೋಷಕರು ಮಗಳಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆದರೆ, ಫೆಬ್ರವರಿ 8ರಿಂದ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮಗಳ ಬಗ್ಗೆ ಆತಂಕಗೊಂಡ ಪೋಷಕರು ಆಕೆ ಇದ್ದ ಪಿಜಿಗೆ ಬಂದು ವಿಚಾರಿಸಿದಾಗ ವೈಶಾಲಿ ಅಲ್ಲಿರಲಿಲ್ಲ. ಪಿಜಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಕೆ ಫೆಬ್ರವರಿ 9ರಂದು ಅಲ್ಲಿಂದ ಹೊರಟು ಹೋಗಿರುವುದು ತಿಳಿದುಬಂದಿದೆ.
ಕಾಣೆಯಾದ ಆಕೆಯನ್ನು ಪತ್ತೆ ಮಾಡಲು ಹೆತ್ತವರು ಸುರತ್ಕಲ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.






