ಕರಾವಳಿ

ಸಿಡಿಲಿನಿಂದ ರಕ್ಷಣೆ ಹೇಗೆ ?

Views: 204

ಸಿಡಿಲಿನಿಂದ ರಕ್ಷಣೆಗೆ ರಾಜ್ಯ ವಿಪತ್ತು ನಿವ೯ಹಣ ಪ್ರಾಧಿಕಾರವು ಸರಳ ಮಾಗ೯ಸೂಚಿ ತಿಳಿಸಿದೆ.

> ಮೊಬೈಲ್ ಆ್ಯಪ್ ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದು ಹೊರಗಿನ ಕೆಲಸಗಳನ್ನು ಮುಂದೂಡಿ ಆದಷ್ಟು ಮನೆಯಲ್ಲಿರುವುದು ಉತ್ತಮ.

> ಮನೆಯ ಸುತ್ತ ಇರುವ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು.

> ಮನೆಯ ಒಳಗಿರುವಾಗ ಸಿಡಿಲು ಬಂದಾಗ ಕಿಟಕಿಯಿಂದ ದೂರವಿರಬೇಕು.

> ದೂರವಾಣಿ,ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು.

> ಗೃಹೋಪಯೋಗಿ ಉಪಕರಣಗಳ ಪ್ಲಗ್ ಗಳನ್ನು ತೆಗೆದಿಡಬೇಕು.

> ಸಿಡಿಲಿನ ಸಂದಭ೯ ಸ್ನಾನ ಮತ್ತು ಪಾತ್ರೆ ಹಾಗೂ ಇತರ ನೀರಿನಲ್ಲಿ ಕೆಲಸಗಳನ್ನು ಮಾಡಬಾರದು.

> ಹೊರಾಂಗಣದಲ್ಲಿದ್ದಾಗ ಸಿಡಿಲು ಬರುವ ಲಕ್ಷಣಗಳಿದ್ದಲ್ಲಿ ತತ್ ಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಸೇರಿಕೊಳ್ಳಬೇಕು.

> ಎತ್ತರ ಪ್ರದೇಶಗಳಲ್ಲಿ ಸಿಡಿಲಿನ ಪ್ರಭಾವ ಅಧಿಕವಾಗಿರುವುದರಿಂದ ತಗ್ಗು ಪ್ರದೇಶಗಳಿಗೆ ತೆರಳಬೇಕು.

> ಸಿಡಿಲಿನ ಸಂದಭ೯ ಕೊಡೆಯನ್ನು ಬಳಸಬಾರದು.

> ಮಕ್ಕಳು ಗಾಳಿಪಟ ಹಾರಿಸಬಾರದು.

> ವಾಹನ ಚಲಾಯಿಸುವಾಗ ಸಿಡಿಲು ಬಂದಾಗ ಮರ ಹಾಗೂ ತಂತಿ ಕಂಬಗಳಿಂದ ವಾಹನವನ್ನು ದೂರ ನಿಲ್ಲಿಸಿ, ವಾಹನದೊಳಗೆ ಇರುವುದು ಉತ್ತಮ .

> ಬಸ್ ನಲ್ಲಿ ಪ್ರಯಾಣಿಸುವಾಗ ಕಿಟಕಿಯ ಗಾಜನ್ನು ಮುಚ್ಚಬೇಕು.

> ಕಾಡಿನಲ್ಲಿ ಇರುವ ಸಂದಭ೯ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಬೇಕು.

ಎಂದು ರಾಜ್ಯ ವಿಪತ್ತು ನಿವ೯ಹಣಾ ಪ್ರಾಧಿಕಾರವು ತಿಳಿಸಿದೆ.

Related Articles

Back to top button
error: Content is protected !!