ಕ್ರೀಡೆ

ಸಿಕ್ಸರ್ ಬಾರಿಸಿ ಕ್ರೀಡಾಂಗಣದಲ್ಲಿ ಕುಸಿದು ಬಿದ್ದು ಕ್ರಿಕೆಟಿಗ ಸಾವು 

Views: 178

ಮುಂಬಯಿ: ಇಲ್ಲಿನ ಮೀರಾರೋಡ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಆಟಗಾರನೊಬ್ಬ ಇದ್ದಕ್ಕಿದ್ದಂತೆ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ದುರಂತ ನಡೆದಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದರೂ ಕೂಡ ಬಿಸಿಗಾಳಿಯಿಂದ ಈ ಆಟಗಾರ ಸಾವನ್ನಪ್ಪಿದ್ದಾನೆ ಎಂದು ಊಹಿಸಲಾಗಿದೆ.

ಸ್ಥಳೀಯ ಟೂರ್ನಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಈ ಬ್ಯಾಟರ್ ಚೆಂಡನ್ನು ಸಿಕ್ಸ್ ಎತ್ತಿದ  ಮರು ಕ್ಷಣವೇ ಪಿಚ್ನಲ್ಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಸಹ ಆಟಗಾರರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ದುರಂತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related Articles

Back to top button
error: Content is protected !!