ರಾಜಕೀಯ

ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ.. ನಾಯಕತ್ವ ಬದಲಾವಣೆಗೆ ಡಿಕೆಶಿ ಪಟ್ಟು:ರಾಹುಲ್ ಫೈನಲ್ ಡಿಸಿಷನ್!

Views: 90

ಕನ್ನಡ ಕರಾವಳಿ ಸುದ್ದಿ:  ಡಿಸಿಎಂ ಡಿಕೆಶಿ ಕಳೆದ 3 ದಿನಗಳಿಂದ ಡೆಲ್ಲಿಯಲ್ಲೇ ಠಿಕಾಣಿ ಹೂಡಿದ್ದು, ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಸಿಎಂಗೂ ಮೊದಲೇ ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದ ಡಿಕೆಶಿಗೆ ಹೈಕಮಾಂಡ್ ಸಮಾಧಾನ ಮಾಡಿದ್ದಾರಂತೆ. ಬಿಹಾರ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮಾಡಿರುವ ಕಾರಣ ಯಾವುದೇ ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ ಹೈಕಮಾಂಡ್ ಇದ್ದು, ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನ ಮಾಡುತ್ತೇವೆ, ಸದ್ಯಕ್ಕೆ ಸೈಲೆಂಟ್ ಆಗಿರುವಂತೆ ಡಿಕೆಶಿಗೆ ಹೈಕಮಾಂಡ್ ಮನವರಿಕೆ ಮಾಡಿದ್ಯಂತೆ. ಹೀಗಾಗಿ ದೆಹಲಿಗೆ ತೆರಳಿದ್ದ ಡಿಸಿಎಂ ಡಿಕೆಶಿ ಸೈಲೆಂಟ್ ಆಗಿಯೇ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.

ರಾಹುಲ್ ಫೈನಲ್ ಡಿಸಿಷನ್!

ಸಂಪುಟ ಪುನರ್ ರಚನೆ ಮೂಲಕ ಸಿಎಂ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾಹುಲ್ ಗಾಂಧಿಯನ್ನು ಸಿಎಂ ಭೇಟಿಯಾಗಿದ್ದರು. ಈ ವೇಳೆ, ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಭೇಟಿಯಾಗಲು ರಾಹುಲ್ ಸೂಚಿಸಿದ್ದ ಕಾರಣ ಸಿದ್ದರಾಮಯ್ಯ ದೆಹಲಿಯಲ್ಲಿ ಖರ್ಗೆ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಿಎಂ ಪ್ರಸ್ತಾಪ ಆಲಿಸಿದ ಖರ್ಗೆ ಸಂಪುಟ ಪುನಾರಚನೆಗೆ ಮಾಡಿಕೊಂಡಿರುವ ತಯಾರಿಗೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಎಷ್ಟು ಸ್ಥಾನ ಬದಲಾವಣೆ ಮಾಡ್ಬೇಕು..? ಯಾರನ್ನು ಬಿಡಬೇಕು..? ಯಾರನ್ನು ಸೇರ್ಪಡೆ ಮಾಡ್ಬೇಕು ಅಂತ ಮಾಹಿತಿ ಪಡೆದಿದ್ದಾರೆ.

ಸದ್ಯಕ್ಕೆ ಅನಗತ್ಯ ಗೊಂದಲ ಸೃಷ್ಟಿಸದಂತೆ ಸೂಚನೆ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ 10 ಸಚಿವರನ್ನು ಕೈಬಿಟ್ಟು, ಖಾಲಿ ಇರೋ 2 ಸ್ಥಾನದ ಜೊತೆ ಒಟ್ಟು 12 ಸಚಿವರ ಭರ್ತಿಗೆ ಸಿಎಂ ಕೇಳಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆ, ಸಂಪುಟ ಪುನರ್ ರಚನೆ ಖರ್ಗೆ ಗ್ರೀನ್‌ ಸಿಗ್ನಲ್‌ ನೀಡಿದ್ದು, ರಾಜ್ಯದ ಕಾಂಗ್ರೆಸ್ನ ಕೆಲ ನಾಯಕರಲ್ಲಿ ಆತಂಕ ಮನೆ ಮಾಡಿದೆ, ಇನ್ನು ಕೆಲ ನಾಯಕರಿಗೆ ಸಂತೋಷ ತಂದಿದೆ. ಸಂಪುಟದಲ್ಲಿ ಯಾರಿಗೆ ಚಾನ್ಸ್?, ಯಾರಿಗೆ ಕೋಕ್ ಅಂತ ಕಾದು ನೋಡಬೇಕಿದೆ.

Related Articles

Back to top button
error: Content is protected !!