ಸಾಲಿಗ್ರಾಮದಲ್ಲಿ ಹೆಂಡತಿಯನ್ನು ಹತ್ಯೆ ಮಾಡಿ, ಮಹಡಿಯಿಂದ ದೇಹ ಎಸೆದು ಹೊಸ ಕಥೆ ಕಟ್ಟಿದ ಪತಿರಾಯ ಬಾಯಿಬಿಟ್ಟಿದ್ದೇನು…?

Views: 556
ಉಡುಪಿ: ಸಾಲಿಗ್ರಾಮ ಕಾರ್ಕಡದ ಕಿರಣ್ ಎನ್ನುವ ಯುವಕ ಪತ್ನಿಯ ರೀಲ್ಸ್ ಹುಚ್ಚು ವಿಪರೀತವಾಗಿ ನೋಡಲಾಗದೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಕಿರಣ್ ಹಾಗೂ ಜಯಶ್ರೀ 4 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ದೂರದ ಊರು ಬೀದರ್ ನಿಂದ ಕಿರಣ್ ಜೊತೆ ಸಪ್ತಪದಿ ತುಳಿದ ನಂತರ ಉಡುಪಿಯ ಬ್ರಹ್ಮಾವರಕ್ಕೆ ಬಂದಿದ್ದಳು ಜಯಶ್ರಿ, ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಪತ್ನಿಯ ಮೊಬೈಲ್ ವಿಪರೀತ ಬಳಸುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಕಿರಣ್ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಜಯಶ್ರೀ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿ. ಕಿರಣ್ ಬ್ರಾಹ್ಮಣ, ಯಾವುದೋ ಕಾರಣಕ್ಕೆ ಮನೆಯಲ್ಲಿ ತಕರಾರು ನಡೆದಿದ್ದರಿಂದ ದಂಪತಿ ಇದ್ದ ಮನೆಯನ್ನು ಬಿಟ್ಟು ಸಾಲಿಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಇಬ್ಬರ ಮಧ್ಯೆ ಆಗಾಗ ಜಗಳವಾಗ್ತಿತ್ತು. ಜಯಶ್ರೀಗೆ ಹಿಂದೊಂದು ಮದುವೆಯೂ ಆಗಿ ವಿಚ್ಛೇದನ ಪಡೆದಿದ್ದಳು.
ಮೊನ್ನೆ ರಾತ್ರಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಕಿರಣ್ ಕತ್ತಿಯಿಂದ ಪತ್ನಿ ಮೇಲೆ ಹಲ್ಲೆಗೈದಿದ್ದಾನೆ. ಪತ್ನಿ ದೇಹದ ಮೂರ್ನಾಲ್ಕು ಕಡೆ ಗಾಯವಾಗಿ ರಕ್ತಸ್ರಾವವಾಗಿದೆ. ಬಳಿಕ ಪತ್ನಿಯ ದೇಹವನ್ನು ಮನೆ ಮೇಲಿಂದ ಎಸೆದಿದ್ದಾನೆ. ನಂತರ ಶವವನ್ನು ಗೊಬ್ಬರದ ಗುಂಡಿಗೆ ಹಾಕಿ ಮುಚ್ಚಲು ಯತ್ನಿಸಿದ್ದು ವಿಫಲವಾಗಿ ಪರಿಚಯಸ್ಥರಿಗೆ ಕರೆ ಮಾಡಿ ಪತ್ನಿ ಟೆರೇಸ್ ಮೇಲಿಂದ ಬಿದ್ದಿದ್ದಾಗಿ ಹೇಳಿದ್ದಕ್ಕೆ ಕೂಡಲೆ ಆಸ್ಪತ್ರೆಗೆ ಸೇರಿಸಿ ಎಂದಿದ್ದಾರೆ. ನಂತರ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ರವಾನಿಸಲಾಗಿದೆ. ಬಳಿಕ ವೈದ್ಯರ ಸೂಚನೆಯಂತೆ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡ್ಲಾಗಿದೆ. ಆದರೆ, ಅಷ್ಟರಲ್ಲಾಗಲೇ ಜಯಶ್ರೀ ಕೊನೆಯುಸಿರೆಳೆದಿದ್ಲು.
ಬಳಿಕ ಆರೋಪಿಯನ್ನು ಕೋಟ ಪೊಲೀಸರು ಆರೋಪಿಯನ್ನು ವಶಕ್ಕೆಪಡೆದು ತೀವ್ರ ವಿಚಾರಣೆಗೆ ನಡೆಸಿದಾಗ ಪತ್ನಿ ಮೊಬೈಲ್ನಲ್ಲಿ ಯಾವಾಗಲೂ ಬ್ಯುಸಿಯಾಗಿರುತ್ತಿದ್ದಳು. ಚಿನ್ನಕ್ಕಾಗಿ ಹಿಂಸೆ ಕೊಡುತ್ತಿದ್ದಳು. ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದಳು ಈ ವೇಳೆ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಶ್ರೀ ಮನೆಯವರು ಬೀದರ್ ನಿಂದ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.