ಯುವಜನ

ಸಹಪಾಠಿಯಿಂದಲೇ ವಿದ್ಯಾರ್ಥಿನಿ ಗರ್ಭಿಣಿ; ಮದುವೆಗೆ ನಿರಾಕರಿಸಿದ ಯುವಕನ ವಿರುದ್ಧ ಪ್ರಕರಣ ದಾಖಲು 

Views: 277

ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಆರೋಪದ ಮೇಲೆ ಸಹಪಾಠಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.

ಬಪ್ಪಳಿಗೆ ನಿವಾಸಿ ಕೃಷ್ಣ ರಾವ್ (21) ಆರೋಪಿ ಯುವಕ ತಲೆಮರೆಸಿಕೊಂಡಿದ್ದಾನೆ

ಸಂತ್ರಸ್ತೆ (21) ಪುತ್ತೂರು ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಯುವತಿಯು ನೀಡಿದ ದೂರಿನಂತೆ, 2024ರ ಅ. 11ರಂದು ಆರೋಪಿ ಕೃಷ್ಣ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡು ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಕೆಲವು ತಿಂಗಳ ಅನಂತರ ಸಂತ್ರಸ್ತೆ ಗರ್ಭಿಣಿಯಾದ ಬಳಿಕ ಈ ವಿಚಾರವನ್ನು ಆರೋಪಿ ಕೃಷ್ಣನಲ್ಲಿ ತಿಳಿಸಿದ್ದಾಳೆ.ನಿನ್ನನ್ನು ಮದುವೆಯಾಗುವುದಾಗಿ ಆರೋಪಿ ಒಪ್ಪಿದ್ದ ಇದೀಗ ಯುವತಿ 9 ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾಳೆ.

Related Articles

Back to top button
error: Content is protected !!