‘ಸರ್ಸೆ ಸೆರಗ’ ಹಾಡು ಅಸಭ್ಯ ಆರೋಪ :ಇಂದು ಮಹಿಳಾ ಆಯೋಗದ ಮುಂದೆ ನಟಿ ನೋರಾ ಫತೇಹಿ
Views: 55
ಕನ್ನಡ ಕರಾವಳಿ ಸುದ್ದಿ: ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ’ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸದಂತೆ ನಟಿ ನೋರಾ ಫತೇಹಿ ಅವರು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಲಿದ್ದಾರೆ.
ಈ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ಸಂಜಯ್ ದತ್ ಅವರು ಆಯೋಗದ ಮುಂದೆ ಹಾಜರಾಗಿದ್ದು, ಲಿಖಿತ ಕ್ಷಮಾಪಣೆ ಸಲ್ಲಿಸಿದ್ದಾರೆ.
‘ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಇಂದು ಬೆಳಿಗ್ಗೆ 11:30ಕ್ಕೆ ಆಯೋಗದ ಮುಂದೆ ಹಾಜರಾಗಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶದಲ್ಲಿರುವ ಕಾರಣ ನೀಡಿ ಈ ಹಿಂದೆ ನೋರಾ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ವಿಚಾರಣೆಯನ್ನು ಮತ್ತೊಂದು ದಿನ ನಿಗದಿಪಡಿಸುವಂತೆಯೂ ಅವರು ಕೋರಿದ್ದರು.
ಮಾ. 15 ರಂದು ಬಿಡುಗಡೆಯಾದ ಈ ಹಾಡಿನ ಸಾಹಿತ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಕರಿಸಲಾಗಿದೆ ಎಂಬ ಆರೋಪವೂ ಬಂದಿತ್ತು. ವಿವಾದ ತೀವ್ರವಾಗುತ್ತಲೇ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಆದರೆ, ಅದಾಗಲೇ ಈ ಹಾಡು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೆಯಾಗಿತ್ತು






