ಇತರೆ

ಸರಸಕ್ಕೊಪ್ಪದ ಆರು ಮಹಿಳೆಯರ ಹತ್ಯೆಗೈದ ಸೈಕೋ ಕಿಲ್ಲರ್ ಸೆರೆ  

Views: 200

ಉತ್ತರ ಪ್ರದೇಶ: ಒಂದೇ ಮಾದರಿಯಲ್ಲಿ ಹಲವು ಕೊಲೆ ಮಾಡಿದ್ದ ಬರೇಲಿಯ ನಟೋರಿಯಸ್ ಸೈಕೋ ಕಿಲ್ಲರ್ ಓರ್ವನನ್ನು ಇಲ್ಲಿನ ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ. ಈ ಮೂಲಕ ಆರು ಮಹಿಳೆಯರ ಹತ್ಯೆಗೈದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಬಕರ್‌ಗಂಜ್ ಗ್ರಾಮದ ನಿವಾಸಿ ಕುಲದೀಪ್ (35) ಬಂಧಿತ ಸೈಕೋ ಕಿಲ್ಲರ್.

ಒಂದೇ ವರ್ಷದಲ್ಲಿ ಶಾಹಿ ಮತ್ತು ಶಿಶ್‌ಗಢ ಎಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಹಿಳೆಯರನ್ನು ಸೀರೆಯಿಂದ ಕತ್ತು ಹಿಸುಕಿ ಒಂದೇ ಮಾದರಿಯಲ್ಲಿ ಕೊಲೆ ಮಾಡಲಾಗಿತ್ತು. ಈ ಸುದ್ದಿ ಸಂಚಲನ ಉಂಟು ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಆರೋಪಿಗಳ ಪತ್ತೆಗೆ 22 ತಂಡಗಳನ್ನು ರಚಿಸಿ ಶೋಧ ನಡೆಸುತ್ತಿದ್ದರು. 1,500 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದರು. ಶಂಕಿತ ಸರಣಿ ಕೊಲೆಗಾರನ ರೇಖಾಚಿತ್ರವನ್ನೂ ಬಿಡುಗಡೆ ಮಾಡಲಾಗಿತ್ತು.

ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಅನುಮಾನದಿಂದ ಕುಲದೀಪ್ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಲಾಗಿತ್ತು. ಈ ವೇಳೆ ತಾನು ಆರು ಮಹಿಳೆಯರನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆತ ಬಿಚ್ಚಿಟ್ಟ ಕೊಲೆಯ ಭೀಕರತೆಯನ್ನು ಕೇಳಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಸರಣಿ ಹಂತಕ ಕುಲದೀಪ್ ಮೂಲತಃ ನವಾಬ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಕರ್‌ಗಂಜ್ ಗ್ರಾಮದ ನಿವಾಸಿ ಆತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ಒಂದು ವರ್ಷದಲ್ಲಿ ಆರು ಮಹಿಳೆಯರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

 

 

Related Articles

Back to top button
error: Content is protected !!