ಸದ್ಯ ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಪೈಪೋಟಿ… ಸಿದ್ದು ಸೈಲೆಂಟ್ ಆಗಿರೋದು ಕುತೂಹಲ?

Views: 48
ಬೆಂಗಳೂರು: ಮೈಸೂರು ಮುಡಾ ನಿವೇಶನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೇಲ್ನೋಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಕೆಲ ಸಚಿವರು ಮತ್ತು ಮುಖಂಡರೇ ತೆರೆಮರೆಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ.ಡಾ.ಜಿ.ಪರಮೇಶ್ವರ್ ಅವರು ಸಚಿವ ಎಂಬಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದು, ಕುತೂಹಲ ಮೂಡಿಸಿದೆ.

ಸಿದ್ದು ಚೇರ್ ಆಪತ್ತು ಇದ್ಯಾ? ಹಾಗಾದ್ರೆ ಸಿದ್ದು ಉತ್ತರಾಧಿಕಾರಿ ಯಾರು? ಯಾರಿಗೆ ಮುಂದಿನ ಸಿಎಂ ಪಟ್ಟ? ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೀತಿದ್ಯಾ? ಪ್ರಶ್ನೆಗಳು ಹತ್ತಾರು ಇವೆ. ಆದರೆ ಉತ್ತರ ಮಾತ್ರ ಸಿಎಂ ಚೇರ್ ನಡೀತಿರುವ ರೇಸ್. ಎಂ.ಬಿ.ಪಾಟೀಲ್ ನೇರವಾಗೇ ಎಂಟ್ರಿಕೊಟ್ಟಿದ್ದಾರೆ.
ಈಗ ಸಿಎಂ ಕುರ್ಚಿ ಕದನಕ್ಕೆ ಎಂ.ಬಿ.ಪಾಟೀಲ್ ರಂಗಪ್ರವೇಶ ಆಗಿದೆ.. ನನಗೂ ಸಿಎಂ ಆಗುವ ಆಸೆ ಇದೆ ಅಂತ ಹೇಳಿದ ಪಾಟೀಲ್, ಸದ್ಯ ಸಿಎಂ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಅಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ಈ ನಡುವೆ ನಾಯಕರ ಮೀಟಿಂಗ್ ಕುತೂಹಲಕ್ಕೆ ಕಾರಣವಾಗಿದೆ.
ಸರ್ಕಾರದ ನಂಬರ್ 2 ಸ್ಥಾನದಲ್ಲಿರುವ ಡಿಕೆಶಿ, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಫ್ರಂಟ್ಲೈನ್ನಲ್ಲಿದ್ರೆ, ಬ್ಯಾಕ್ಸೈಡ್ನಲ್ಲಿ ಎಂ.ಬಿ.ಪಾಟೀಲ್ ಟವಲ್ ಜೊತೆ ನಿಂತಿದ್ದಾರೆ. ಸಿನಿಯರ್ ಸಿಟಿಜನ್ ಪಾಸ್ ಇದೆ ಅಂತ ದೇಶಪಾಂಡೆ, ಸಿದ್ದು ಬಲಕ್ಕಾಗಿ ಕಾದಿದ್ದಾರೆ.
ಸದ್ಯ ಖಾಲಿ ಇಲ್ಲದ ಸಿಎಂ ಚೇರ್ಗಾಗಿ ಕಾಂಗ್ರೆಸ್ನಲ್ಲಿ ದೊಡ್ಡ ಪಾಳಿ ಹತ್ತಿದೆ. ಜಾತಿ, ಪ್ರಾಬಲ್ಯ, ಸಿನಿಯಾರಿಟಿ, ವರ್ಚಸ್ಸು. ಈ ಕುರ್ಚಿಗೆ ಮಾನದಂಡಗಳ ಮಂಡನೆ ಆಗ್ತಿದೆ. ಇಷ್ಟೆಲ್ಲಾ ಬೆಳವಣಿಗೆ ಆಗ್ತಿದ್ರೂ ಸಿದ್ದು ಮಾತ್ರ ಸೈಲೆಂಟ್ ಆಗಿರೋದು ಕುತೂಹಲ ಮೂಡಿಸ್ತಿದೆ.






