ಕರಾವಳಿ

ಸಂಪಾಜೆ: ಸ್ಕೂಟಿ ಕಂಟೈನರ್ ಡಿಕ್ಕಿ, ದಂಪತಿ ಸಾವು

Views: 199

ಕನ್ನಡ ಕರಾವಳಿ ಸುದ್ದಿ: ಸಂಪಾಜೆ ಕಂಟೈನರ್ ಲಾರಿ ಮತ್ತು ಸ್ಕೂಟಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ದಂಪತಿ ಸಾವನಪ್ಪಿದ ಘಟನೆ ಸಂಪಾಜೆ ಬಳಿಯ ಕೊಯನಾಡು ಸಮೀಪದ ಚಡಾವು ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಚಿದಾನಂದ ಆಚಾರ್ಯ ಸಹಸವಾರೆ ನಳಿನಿ ಎಂದು ಗುರುತಿಸಲಾಗಿದೆ. ಸ್ಕೂಟಿಯಲ್ಲಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಹಾಗೂ ಮಡಿಕೇರಿ ಕಡೆಯಿಂದ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾದ ಸಂಭವಸಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿ ರಸ್ತೆ ಬದಿಯ ತಡೆಗೋಡೆಯನ್ನು ದಾಟಿ ಕಾಡಿನೊಳಗೆ ನುಗ್ಗಿದೆ.

ದಂಪತಿ ಪುತ್ತೂರಿನ ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮ ಒಂದಕ್ಕೆ ತೆರಳುತ್ತಿದ್ದರು ತಮ್ಮ 12 ವರ್ಷದ ಮಗನನ್ನು ಬಸ್ಸಿನಲ್ಲಿ ಕಳುಹಿಸಿ ಕೊಟ್ಟು ತಾವಿಬ್ಬರು ಸ್ಕೂಟಿಯಲ್ಲಿ ತೆರಳುತ್ತಿದ್ದರು.

ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button