ಪೊಲೀಸ್ ಇಲಾಖೆಯ ಮಹಾನ್ ಸಾಧಕಿ ರೇವತಿ ರಾಮ್ ಗೆ ಡಾಕ್ಟರೇಟ್ ಪದವಿ ಪ್ರದಾನ

Views: 39
ಉಡುಪಿ: ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ ಬೃಹ್ಮಾವರ ತಾಲೂಕಿನ ಸಾಲಿಕೇರಿ ನಿವಾಸಿ ಶ್ರೀಮತಿ ರೇವತಿ ರಾಮ್ ಮಂಡಿಸಿದ ” Effects of yoga and prana/ energy intervention psychological wellbeing and criminal attitude of human and criminals” ಎಂಬ ಪ್ರಬಂಧಕ್ಕೆ ಮತ್ತು ಸಮಾಜ ಸೇವೆಗೆ Brampton International university, Canada ಮತ್ತು ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ಇವರು ದಿನಾಂಕ 09.12.2023 ರಂದು ಬೆಂಗಳೂರಿನಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.
ರೇವತಿ ರಾಮ್ ಅವರು ಬ್ರಹ್ಮಾವರದಲ್ಲಿ ಬಿಕಾಂ ಪದವಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು,ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ,ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು, ಗದಗ, ಧಾರವಾಡದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಷ್ಟಾಂಗ ಯೋಗದಲ್ಲಿ ಸಿದ್ಧಿ ಪಡೆದು 50 ಕ್ಕೂ ಹೆಚ್ಚು ವಿವಿಧ ಧ್ಯಾನ ವಿಧಾನಗಳನ್ನು ಅಭ್ಯಸಿಸಿ ಅಧ್ಯಾತ್ಮಿಕತೆಯಲ್ಲಿ ಅಪಾರ ಜ್ಞಾನವನ್ನು ಪಡೆದಿರುತ್ತಾರೆ.
‘ತಲ್ಲಣಿಸದಿರು ಓ ಮನವೇ’ ಎಂಬ ಸ್ವರಚಿತ 33 ಲೇಖನಗಳ ಗುಚ್ಚವನ್ನು ಪ್ರಕಟಿಸಿದ್ದು, ಅದರ ಮೌಲ್ಯವನ್ನು ಪುಸ್ತಕದ ರಾಯಲ್ಟಿ ಸಹಿತ ‘ರಿದ್ಧಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್’ ಗೆ ಸಮರ್ಪಿಸಿದ್ದಾರೆ.
ಇವರ ಎರಡು ಸಂಶೋಧನಾ ಗ್ರಂಥಗಳು ಇಂಟರ್ ನ್ಯಾಶನಲ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.3 ಇಂಟರ್ ನ್ಯಾಶನಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ. ‘ಕರ್ನಾಟಕ ಮಹಿಳಾ ರತ್ನ’ ಪ್ರಶಸ್ತಿ ಸೇರಿದಂತೆ ಸಾರ್ವಜನಿಕ ಸಂಸ್ಥೆ ಹಾಗೂ ಇನ್ನಿತರ 50 ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಇವರು ಬ್ರಹ್ಮಾವರ ಸಮೀಪ ಸಾಲಿಕೇರಿಯ ಶ್ರೀಮತಿ ಲಲಿತಾ ಮತ್ತು ನಾರಾಯಣ ಶೆಟ್ಟಿಗಾರರ ಪುತ್ರಿ
-ಪರಿಚಯ ವರದಿ: ಬಿ.ವಿ.ಶೆಟ್ಟಿಗಾರ ಉಡುಪಿ