ಶಿಸ್ತಿನ ಸೈನಿಕನಂತೆಯೇ ಕಾರ್ಯನಿರ್ವತ್ತಿದ್ದ ನಾಯಿ ಪ್ಯಾಂಟಮ್ ಉಗ್ರರ ಗುಂಡಿಗೆ ಬಲಿ

Views: 129
ಕನ್ನಡ ಕರಾವಳಿ ಸುದ್ದಿ :ಪ್ಯಾಂಟಮ್, ಭಾರತೀಯ ಸೇನೆಯಲ್ಲಿ ಅತ್ಯಂತ ಧೈರ್ಯಶಾಲಿ ಶ್ವಾನವೆಂದೇ ಹೆಸರು ಪಡೆದಿದ್ದ ಬೆಲ್ಜಿಯಂ ಮಾಲಿನೋಯಿಸ್ ತಳಿಯ ಶ್ವಾನ. ಕಳೆದ ಎರಡು ವರ್ಷಗಳಿಂದ ಸೇನಾಪಡೆಯ ಭಯಾನಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಪ್ಯಾಂಟಮ್. ಅದೇ ರೀತಿ ಸೋಮವಾರದಂದು ಭಯೋತ್ಪಾದಕರನ್ನು ಹುಡುಕಿ ಹೊರಟಿದ್ದ ಸೇನಾಪಡೆಯೊಂದಿಗೆ ಪ್ಯಾಂಟಮ್ ಕೂಡ ಸೇರಿಕೊಂಡಿತ್ತು. ಉಗ್ರರು ಹಾಗೂ ಸೇನಾಪಡೆಯ ನಡುವೆ ನಡೆಯುತ್ತಿದ್ದ ಗುಂಡಿನ ದಾಳಿಯಲ್ಲಿ ಪ್ಯಾಂಟಮ್ಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ಯಾಂಟಮ್ ಅಸುನೀಗಿದೆ.
ಸೋಮವಾರ ಮುಂಜಾನೆ ನಡೆದ ಘಟನೆಯಲ್ಲಿ ಪ್ಯಾಂಟಮ್ ಪ್ರಾಣ ಕಳೆದುಕೊಂಡಿದ್ದಾನೆ ಆಗಸ್ಟ್ 2022ರಿಂದ ಇಲ್ಲಿಯವರೆಗೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ಯಾಂಟಮ್ ಒಬ್ಬ ಶಿಸ್ತಿನ ಸೈನಿಕನಂತೆಯೇ ಕಾರ್ಯನಿರ್ವಹಿಸಿದ್ದಾನೆ
ಇತ್ತೀಚೆಗೆ ಮೂವರು ಉಗ್ರರು ಭಾರತೀಯ ಸೇನಾ ಆ್ಯಂಬುಲೆನ್ಸ್ ಮೇಲೆ ಬಟ್ಟಾಲಾ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಲು ಅಂತ ಸೇನೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ಜಂಟಿಯಾಗಿ ಶೋಧಕಾರ್ಯ ನಡೆಸಿದ್ದರು. ಅಖನೂರ್ ಏರಿಯಾದಲ್ಲಿ ಒಬ್ಬ ಉಗ್ರನನ್ನು ಹೊಡೆದುರಳಿಸುವಲ್ಲಿ ಯಶಸ್ವಿಯಾದ ಸೇನಾಪಡೆ ಹಾಗೂ ಪೊಲೀಸರು ಮಂಗಳವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಉಳಿದ ಇಬ್ಬರು ಉಗ್ರರನ್ನು ಯಮಪುರಿಗೆ ಅಟ್ಟಿದ್ದಾರೆ. ಇದೇ ಕಾರ್ಯಾಚರಣೆ ವೇಳೆ ಸೇನಾಪಡೆಯೊಂದಿಗೆ ಉಗ್ರರ ಪತ್ತೆಗೆ ಹೋಗಿದ್ದ ಪ್ಯಾಂಟಮ್ ಗುಂಡು ತಗುಲಿ ಅಸುನೀಗಿದ್ದಾನೆ. ಪ್ಯಾಂಟಮ್ಗೆ ಎಲ್ಲ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.






