ಶಿಕ್ಷಣ
ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆ ಯಲ್ಲಿ ಮಕ್ಕಳಿಗೆ ‘ರೈನಿ ಡೇ’ಆಚರಣೆ

Views: 99
ಕನ್ನಡ ಕರಾವಳಿ ಸುದ್ದಿ: ಶಿರೂರಿನ ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಜುಲೈ 19 ಶನಿವಾರದಂದು ಪ್ರೀ ಕೆಜಿ ಯಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ‘ರೈನಿ ಡೇ’ ಆಚರಿಸಲಾಯಿತು.
ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಮಳೆಯಲ್ಲಿ ಆಡಬೇಕು ಎಂಬ ಆಸೆ ಇದ್ದರೂ ಸಹ ಹಿರಿಯರು ಅದಕ್ಕೆ ಅವಕಾಶ ನೀಡುವುದಿಲ್ಲ ಅವರು ಬಾಲ್ಯದಲ್ಲಿ ಸಂತೋಷದಿಂದ ಅನುಭವಿಸಬಹುದಾದ ವಿಶೇಷ ಸಂದರ್ಭ. ಈ ಕಾರಣಕ್ಕಾಗಿ ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ‘ರೈನಿ ಡೇ’ ಆಚರಿಸುವ ಮೂಲಕ ಮಕ್ಕಳಿಗೆ ಅವಕಾಶ ಒದಗಿಸಲಾಯಿತು. ಪ್ರೀ ಕೆ ಜಿ ಯಿಂದ 3ನೇ ತರಗತಿಯ ಮಕ್ಕಳು ಅದಕ್ಕಾಗಿಯೇ ಬಣ್ಣ ಬಣ್ಣದ ಕೊಡೆಯೊಂದಿಗೆ ಬಟ್ಟೆಗಳನ್ನು ಧರಿಸಿ ಬಂದಿದ್ದರು ಶಾಲಾ ಅಂಗಳದಲ್ಲಿ ಬೀಳುತ್ತಿದ್ದ ಮಳೆಯಲ್ಲಿ ಚಿಣ್ಣರು ಬಣ್ಣ ಬಣ್ಣದ ಕೊಡೆಯೊಂದಿಗೆ ಹಾಡುತ್ತಾ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತ ಶಿಕ್ಷಕರೊಂದಿಗೆ ಸಂಭ್ರಮಿಸಿದರು ನಂತರ ಕಾಗದದ ದೋಣಿಯನ್ನು ತಯಾರಿಸಿ ಆಟ ಆಡಿದರು. ಎಲ್ಲಾ ವಿದ್ಯಾರ್ಥಿಗಳು ಸಂತೋಷ ಹಾಗೂ ಉತ್ಸಾಹದಿಂದ ಭಾಗವಹಿಸಿದರು.