ಕೃಷಿ
ಶಂಕರನಾರಾಯಣ: ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ
Views: 109
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದಲ್ಲಿ ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಾರದೆ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸುಬ್ಬ ಕುಲಾಲ (64) ಮನೆಯ ಸಮೀಪ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೈದಿದ್ದಾರೆ.
ಕೃಷಿಕರಾಗಿದ್ದ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿ ದ್ದರು. ಅ.18ರಂದು ಆಸ್ಪತ್ರೆಗೆಂದು ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಅ.19ರಂದು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕಾಯಿಲೆ ಗುಣವಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಕರುಣಾಕರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






