ವಿಶ್ವ ದಾಖಲೆ ನಿರ್ಮಿಸಿದ ಉಡುಪಿಯ ಸಿದ್ದಿ ಸೀವಿಂಗ್ ಸ್ಕೂಲ್ ನ ವಿದ್ಯಾರ್ಥಿಗಳು

Views: 147
ಕನ್ನಡ ಕರಾವಳಿ ಸುದ್ದಿ: ದಿನಾಂಕ 10.8.2025 ರಂದು ಬೆಂಗಳೂರಿನ ಇಂಡಿಯನ್ ಆರಿ ವರ್ಕಸ್ ಫೆಡರೇಶನ್ ಆಯೋಜಕತ್ವದಲ್ಲಿ ಬೆಂಗಳೂರಿನಲ್ಲಿ ಜರಗಿದ ಎರಡನೇ ಅಂತರಾಷ್ಟ್ರೀಯ ಆರಿ ಕಾರ್ಮಿಕರ ಸಮ್ಮೇಳನ -2025 ರಲ್ಲಿ ನಡೆದ ನೊಬೆಲ್ ವರ್ಡ್ ದಾಖಲೆಗಳಲ್ಲಿ ಸಿದ್ದಿ ಸೀವಿಂಗ್ ಸ್ಕೂಲ್ ನ 24 ವಿದ್ಯಾರ್ಥಿಗಳು ಭಾಗವಹಿಸಿ “ನೊಬೆಲ್ ವರ್ಡ್ ದಾಖಲೆಗಳು ಮತ್ತು ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಪ್ರಮಾಣ ಪತ್ರ ಮತ್ತು ಪದಕಗಳನ್ನು ಪಡೆದುಕೊಂಡಿರುತ್ತಾರೆ. ಅದರೊಂದಿಗೆ ಭಾರತೀಯ ಆರಿ ಕಾರ್ಮಿಕರ ಫೆಡರೇಶನ್ ನಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ನೋಂದಾಯಿಸಿಕೊಂಡಿರುತ್ತಾರೆ.
ವಿಶ್ವ ದಾಖಲೆಯ ಶೀರ್ಷಿಕೆ 1 ಗಂಟೆ 30 ನಿಮಿಷಗಳ ಒಳಗೆ ಮಹಿಳೆಯರ ಸ್ವಾತಂತ್ರ್ಯದ ವಿಷಯದ ಅಡಿಯಲ್ಲಿ ಆರಿ ಕೆಲಸವನ್ನು ನಿರ್ವಹಿಸುತ್ತಿರುವ ಗರಿಷ್ಠ ಸಂಖ್ಯೆಯ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲಾತ್ಮಕತೆಯನ್ನು ಪ್ರತಿಭೆಯನ್ನು ಪ್ರಚುರ ಪಡಿಸಿರುತ್ತಾರೆ.
ಸಿದ್ದಿ ಸೀವಿಂಗ್ ಸ್ಕೂಲ್ ನ ಶಿಕ್ಷಕಿ ಶ್ರೀಮತಿ ರಮ್ಯ ಎ.ಸಿ. ಅವರು ವಿಶ್ವ ದಾಖಲೆಯನ್ನು ನಿರ್ಮಿಸುವುದರೊಂದಿಗೆ ಉತ್ತಮ ಅರಿ ಶಿಕ್ಷಕಿ ಎಂಬ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಅವರ ವಿದ್ಯಾರ್ಥಿ ಕುಮಾರಿ ಸಹನ ಅವರು ವಿಶ್ವ ದಾಖಲೆಯಲ್ಲಿ ನಡೆದ ಆರಿ ಪ್ರಾತ್ಯಕ್ಷತೆಯಲ್ಲಿ ಉತ್ತಮ 10 ಆರಿ ಕೆಲಸಗಳಲ್ಲಿ ಆರನೇ ಸ್ಥಾನ ಗಳಿಸಿ ನಗದು ಬಹುಮಾನ ಪಡೆದು ಕೊಂಡಿರುತ್ತಾರೆ.ಅಲ್ಲದೆ ಈ ಕೆಳಗಿನ ವಿದ್ಯಾರ್ಥಿಗಳು ವಿಶ್ವ ದಾಖಲೆಯಲ್ಲಿ ಹೆಸರನ್ನು ದಾಖಲಿಸಿಕೊಂಡಿರುತ್ತಾರೆ. ಕುಮಾರಿ ಪ್ರಜನ್ಯ ಜಾಯ್ಕರ್ ಕಾಂಚನ್, ಶ್ರೀಮತಿ ರೋಹಿಣಿ ಸಿ ಅಮೀನ್, ಶ್ರೀಮತಿ ಭವಾನಿ ಪುತ್ರನ್, ಶ್ರೀಮತಿ ಮಂಜುಳ ಗಣಪ ಪೂಜಾರಿ, ಕುಮಾರಿ ಸಹನಾ, ಕುಮಾರಿ ಪ್ರಾರ್ಥನ ಕೆ, ಆಚಾರ್ಯ, ಕುಮಾರಿ ದೀಕ್ಷಾ ಆಚಾರ್ಯ, ಶ್ರೀಮತಿ ಮಧುಸ್ಮಿತ ಶೆಟ್ಟಿಗಾರ್, ಕುಮಾರಿ ವಿದ್ಯಾ, ಶ್ರೀಮತಿ ನಿಕಿತಾ ಪೂಜಾರಿ, ಕುಮಾರಿ ಶ್ರೀವಿದ್ಯಾ ಕೆ. ಎಸ್, ಶ್ರೀಮತಿ ವಿಶಾಲ ಆರ್. ಮೆಂಡನ್, ಶ್ರೀಮತಿ ದೀಪಿಕಾ ಕೆ, ಶ್ರೀಮತಿ ಸಂಗೀತ, ಶ್ರೀಮತಿ ಪ್ರಮೀಳಾ, ಕುಮಾರಿ ಗ್ರೀಷ್ಮ, ಕುಮಾರಿ ಅನುಷಾ ಕೆ, ಶ್ರೀಮತಿ ಆಶಾ, ಶ್ರೀಮತಿ ರೇಣುಕವ್ವ, ಶ್ರೀಮತಿ ಆಶಾ, ಶ್ರೀಮತಿ ಅರ್ಚನಾ, ಕುಮಾರಿ ಉಷಾ ಎಚ್.ಕೆ.