ವಾಯುಭಾರ ಕುಸಿತ: ಭಾರೀ ಮಳೆ ನಿರೀಕ್ಷೆ, ಕರಾವಳಿಯಲ್ಲಿ ‘ರೆಡ್ ಅಲರ್ಟ್’

Views: 170
ಕನ್ನಡ ಕರಾವಳಿ ಸುದ್ದಿ: ಆಂಧ್ರ ಪ್ರದೇಶ, ಒರಿಸ್ಸಾ ಕರಾವಳಿ ತೀರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
‘ರೆಡ್ ಅಲರ್ಟ್’ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ.
ಭಾರೀ ಹಿನ್ನೆಲೆಯಲ್ಲಿ ಈಗಾಗಲೇ ದ.ಕ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ಸೋಮವಾರ ರಜೆ ಘೋಷಿಸಿದ್ದಾರೆ.
ಕರಾವಳಿ ಭಾಗದಲ್ಲಿ ಅಗಸ್ಟ್ 19, 20 ಆರೆಂಜ್ ಅಲರ್ಟ್ ಮತ್ತು ಆ. 21ರಿಂದ 23ರವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆ; ಅದು.18,19ರಂದು ‘ರೆಡ್ ಅಲರ್ಟ್’
ಚಂಡಮಾರುತ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಆ. 18,19ರಂದು ಭಾರೀ ಮಳೆ ಸುರಿಯಲಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ಗಾಳಿ ಇರಲಿದ್ದು, ಸಮುದ್ರದ ಅಲೆಗಳ ಎತ್ತರವೂ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರತದ ಹಿನ್ನೆಲೆಯಲ್ಲಿ ರವಿವಾರವೂ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ನಿರಂತರ ಧಾರಾಕಾರ ಮಳೆ ಸುರಿದಿದ್ದು, ಕಾರ್ಕಳ, ಕುಂದಾಪುರ, ಅಮಾಸೆಬೈಲು, ಬೈಂದೂರು, ಹೆಬ್ರಿ, ಮಣಿಪಾಲ, ಕೋಟ, ಬ್ರಹ್ಮಾವರ, ಮಲ್ಪೆ ಕಟಪಾಡಿ, ಶಿರ್ವ, ಕಾಪು, ಪಡುಬಿದ್ರಿಯಲ್ಲಿ ಉತ್ತಮ ಮಳೆ ಸುರಿದಿದೆ.