ಇತರೆ
ವರದಕ್ಷಿಣೆ ಕಿರುಕುಳ, ಮಹಿಳೆ ಕುತ್ತಿಗೆ ಹಿಸುಕಿ ಕೊಲೆ : ಪತಿ, ಅತ್ತೆ ಅರೆಸ್ಟ್

Views: 136
ಕನ್ನಡ ಕರಾವಳಿ ಸುದ್ದಿ : ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು, ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೂಡ್ಲುರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿತ್ಯ ನಿರ್ಮಲ (25) ಮೃತಪಟ್ಟ ಗೃಹಿಣಿ ಎಂದು ಗುರುತಿಸಲಾಗಿದ್ದು, ನಿತ್ಯ ನಿರ್ಮಲ ಅವರ ಪತಿ ಕಿರಣ್ ಹಾಗೂ, ಅತ್ತೆ ವಿರುದ್ಧ ದೂರು ದಾಖಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಕಿರಣ್ ರನ್ನ ನಿರ್ಮಲ ಮದುವೆಯಾಗಿದ್ದರು. ಆಗಾಗ ವರದಕ್ಷಿಣೆ ತರುವಂತೆ ನಿರ್ಮಲಾರಿಗೆ ಪತಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ನಿನ್ನೆ ಬುಧವಾರ ನಿರ್ಮಲ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ನಿರ್ಮಲ ಪೋಷಕರಿಗೂ ಮಾಹಿತಿ ತಿಳಿಸದೇ ಅಂತ್ಯಕ್ರಿಯೆಗೆ ಕಿರಣ್ ಕುಟುಂಬಸ್ಥರು ಮುಂದಾಗಿದ್ದಾರೆ.






