ಕ್ರೀಡೆ

ವಕ್ವಾಡಿ:ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಸಾಧಕರಿಗೆ ಸನ್ಮಾನ

Views: 5

ಕುಂದಾಪುರ: ಇತ್ತೀಚೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಕ್ವಾಡಿ ಗ್ರಾಮದ ಇಬ್ಬರು ಕ್ರೀಡಾ ಸಾಧಕರನ್ನು ಯುವಶಕ್ತಿ ಮಿತ್ರ ಮಂಡಲ (ರಿ). ಹೆಗ್ಗಾರ್ ಬೈಲು ವಕ್ವಾಡಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಕ್ರೀಡಾ ಸಾಧಕರ ಮನೆಗೆ ತೆರಳಿ ಸನ್ಮಾನ ನೀಡಿ, ಅಭಿನಂದಿಸಲಾಯಿತು.

ರಾಜ್ಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾದ ಅಬ್ದುಲ್ ತೌಫಿಕ್

ವಕ್ವಾಡಿ ಗ್ರಾಮದ ಜನತಾ ಕಾಲೋನಿಯ ನಿವಾಸಿ ಮಯ್ಯದ್ದಿ ಶಿರ್ವ ಮತ್ತು ಶಲೀಕಾ ಬಾನು ರವರ ಪುತ್ರ ಅಬ್ದುಲ್ ತೌಫಿಕ್ , ವಕ್ವಾಡಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಹಳೆ ವಿಧ್ಯಾರ್ಥಿಯಾಗಿದ್ದು ,ಇದೀಗ ಕುಂದಾಪುರ  ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು , ಕಾಲೇಜು ವಿಭಾಗದಲ್ಲಿ ರಾಜ್ಯ ವಾಲಿಬಾಲ್ ತಂಡಕ್ಕೆ ಆಯ್ಕೆಗೊಂಡಿರುತ್ತಾರೆ.

ಗುಂಡೆಸೆತ ಮತ್ತು ಜಾವಲಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಭರತ್

ವಕ್ವಾಡಿಯ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ , ವಕ್ವಾಡಿ ಗ್ರಾಮದ ತೋಟದ ಬೆಟ್ಟು ಮಂಜುನಾಥ್ ಪೂಜಾರಿ ಹಾಗೂ ನಾಗರತ್ನ ಪೂಜಾರಿಯವರ ಪುತ್ರ ಭರತ್ ಜಿಲ್ಲಾಮಟ್ಟದಲ್ಲಿ ಗುಂಡೆಸೆತ ಮತ್ತು ಜಾವಲಿಂಗ್  ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಇವರಿಬ್ಬರ ಸಾಧನೆಯನ್ನು ಗುರುತಿಸಿ ,  ಮುಂದೆ ರಾಜ್ಯಮಟ್ಟದಲ್ಲಿ ವಿಜಯಶಾಲಿಯಾಗಿ  ಊರಿನ ಗೌರವ ಹೆಚ್ಚಿಸಲಿ ಎನ್ನುವ ಉದ್ದೇಶದಿಂದ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಥಮಿಕ ಶಾಲೆಯ ವಕ್ವಾಡಿಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಸತ್ಯರಂಜನ್ ಹೆಗ್ಡೆ, ಯುವಶಕ್ತಿ ಮಿತ್ರ ಮಂಡಲ (ರಿ.) ಹೆಗ್ಗಾರ್ ಬೈಲು ವಕ್ವಾಡಿ ಯ ಅಧ್ಯಕ್ಷರಾದ ವಿಜಯ್ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ಶಂಕರ್ ಕುಲಾಲ್, ಗಿರೀಶ್ ಕುಲಾಲ್, ರಾಕೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಉಮೇಶ್ ಪೂಜಾರಿ,  ಸದಾಶಿವ ಶೆಟ್ಟಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

Related Articles

Back to top button
error: Content is protected !!