ಇತರೆ
ರೋಟರಿ ಕ್ಲಬ್ ಕೋಟೇಶ್ವರ: ಕುಂದಾಪುರ ಕೋಡಿ ಬೀಚ್ ಸ್ವಚ್ಛತಾ ಅಭಿಯಾನ
Views: 84
ಕನ್ನಡ ಕರಾವಳಿ ಸುದ್ದಿ: ರೋಟರಿ ಕ್ಲಬ್ ಕೋಟೇಶ್ವರ, ರೋಟರೆಕ್ಟ್ ಕ್ಲಬ್ ಕೋಟೇಶ್ವರ, ಕ್ಲೀನ್ ಕುಂದಾಪುರ ಆಶ್ರಯದಲ್ಲಿ ಕೋಡಿ ಬೀಚಿನಲ್ಲಿ ಸುಮಾರು 40 ಜನ ಸೇರಿ ಕಸ ಹೆಕ್ಕುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಕಾರ್ಯದರ್ಶಿಗಳು, ರೋಟರಾಕ್ಟ್ ಅಧ್ಯಕ್ಷ ಪ್ರಾಂಜಲಿ ಪ್ರಭಾಕರ್ ಹಾಗೂ ಕಾರ್ಯದರ್ಶಿಗಳು, ಕ್ಲೀನ್ ಕುಂದಾಪುರ ಅಧ್ಯಕ್ಷರು ಮತ್ತು ಎಲ್ಲಾ ಕ್ಲಬ್ಬಿನ ಸದಸ್ಯರು ಹಾಜರಿದ್ದು ಸುಮಾರು 50ಕ್ಕೂ ಮಿಕ್ಕಿ ಚೀಲದ ಕಸವನ್ನು ಪುರಸಭೆ ಕುಂದಾಪುರಕ್ಕೆ ಹಸ್ತಾಂತರಿಸಲಾಯಿತು.






