ಸಾಂಸ್ಕೃತಿಕ

ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್:  ಸಮವಸ್ತ್ರ  ಮತ್ತು ಕೊಡೆ ಹಸ್ತಾಂತರ

Views: 0

ಕುಂದಾಪುರ: ಕುಂದಾಪುರದ ಬಿ. ಆರ್. ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರು ಆದ ರೋ. ಅಜಯ ಹವಾಲ್ದಾರ್‌ರವರು ಕೊಡಮಾಡಿದ ಸಮವಸ್ತ್ರ

ಮತ್ತು ಕೊಡೆಗಳನ್ನು ಅಧ್ಯಕ್ಷ ರೋ. ನಾಗರಾಜ ನಾಯ್ಕರವರು ಹಸ್ತಾಂತರಿಸಿದರು. ಗೌರವಾನ್ವಿತ ಹಿರಿಯ ನ್ಯಾಯವಾದಿಗಳು, ಶಾಲೆಯ ಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಎ.ಎಸ್.ಎನ್. ಹೆಬ್ಬಾರ್‌ರವರು ಉಪಸ್ಥಿತರಿದ್ದು ರೋಟರಿಯ ಸಹಾಯವನ್ನು ಅಭಿನಂದಿಸಿದರು.

ರೋಟರಿ ಹಿರಿಯ ಸದಸ್ಯರಾದ ಕೆ.ಎಚ್. ಚಂದ್ರಶೇಖರ, ಗೀತಾ ಮುಕುಂದನ್, ಗಣೇಶ ಬೆಟ್ಟಿನ್, ಅಜಯ ಹವಾಲ್ದಾರ್, ಹಾಗೂ ಕಾರ್ಯದರ್ಶಿ ಪ್ರಶಾಂತ ಹವಾಲ್ದಾರ್ ಉಪಸ್ಥಿತರಿದ್ದರು.

Related Articles

Back to top button
error: Content is protected !!