ರಾಷ್ಟ್ರೀಯ ಕೈಮಗ್ಗ ದಿನಾಚರಣೆ: ಬಾರ್ಕೂರು ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ಕುಲ ದೇವಳದಲ್ಲಿ ವಿವಿಧ ಸ್ಪರ್ಧೆಗಳು

Views: 0
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ) ಮಂಗಳೂರು. ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ ಇವರ ಆಶ್ರಯದಲ್ಲಿ ರವಿವಾರ ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಬಾರ್ಕೂರು ದೇವಳದ ಆಡಳಿತ ಮೊಕ್ತೇಸರರಾದ ಡಾ. ಜಯರಾಮ್ ಶೆಟ್ಟಿಗಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರವು ಕೈಮಗ್ಗ ಪುನಶ್ಚೇತನವನ್ನು ಬೆಂಬಲಿಸುವ ಅನೇಕ ನೀತಿಗಳನ್ನು ಪರಿಚಯಿಸುವ ಮೂಲಕ ಕೈಮಗ್ಗ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುತ್ತಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಕೈಮಗ್ಗ ನೇಕಾರರಲ್ಲಿ ಸ್ವಾಭಿಮಾನ ಮೂಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ( ರಿ) ಮಂಗಳೂರು ಇದರ ಅಧ್ಯಕ್ಷರಾದ ರಾಮದಾಸ ಶೆಟ್ಟಿಗಾರ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಕಾಲಚಕ್ರ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿದ್ದರಿಂದ ನೇಕಾರರು ತಯಾರಿಸುವ ಬಟ್ಟೆಗಳಿಗಿಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಸೀರೆಗಳು ಲಭ್ಯವಾಗಿದ್ದರಿಂದ ನೇಕಾರರ ಸ್ಥಿತಿ ಈ ಮಟ್ಟಕ್ಕೆ ಬರಲು ಕಾರಣವಾಯಿತು.ಕೈಮಗ್ಗ ನೇಕಾರರ ಬಗ್ಗೆ ಸರ್ಕಾರ ಸ್ಪಂಧಿಸಿ ಕ್ರಮ ಕೈಗೊಂಡರೆ ನೇಕಾರರ ಸ್ಥಿತಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ( ರಿ) ಇದರ ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿಗಾರ್,ಬಾರಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ ಅವರು ಶುಭಾಶಂಶನೆಗೈದರು. ದ.ಕ.ಪದ್ಮಶಾಲಿ ಮಹಾಸಭಾ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿಗಾರ್, ದೇವಳದ ಪೂಜಾ ಸೇವಾಕರ್ತರಾದ ಶ್ರೀಮತಿ ವಿಮಲಾ ಮತ್ತು ಶ್ರೀ ರವೀಂದ್ರ ಶೆಟ್ಟಿಗಾರ್ ಹೂವಿನ ಕೆರೆ ಅವರು ಉಪಸ್ಥಿತರಿದ್ದರು.
ಪದ್ಮಶಾಲಿ ಮಹಾಸಭಾ ನೇಕಾರ ವೇದಿಕೆಯ ಸಂಚಾಲಕ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಸಮಾಜದ ಕುಲ ಕಸುಬುಗಳ ಬಗ್ಗೆ ಮಕ್ಕಳಿಂದ ಆರಂಭಗೊಂಡು ಅವರಿಗೆ ಅರಿವು ಮೂಡಿಸಿದಾಗ ಅದರ ಉದ್ದೇಶ ಅರಿತಾಗ ನೇಕಾರರ ಸ್ಥಿತಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ಶೋಭಾ,ಆಶಾಲತಾ, ಹೇಮಲತಾ ಅವರು ಪ್ರಾರ್ಥನೆಗೈದರು. ಸವಿತಾ ಭಾಸ್ಕರ್ ಶೆಟ್ಟಿಗಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಾಸ್ತಾನ ಭಾಸ್ಕರ್ ಶೆಟ್ಟಿಗಾರ್ ಅವರು ಸ್ವಾಗತಿಸಿದರು. ಮಹಾಸಭಾದ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿಗಾರ ವಂದಿಸಿದರು.
ಈ ಸಂದರ್ಭದಲ್ಲಿ 16 ದೇವಸ್ಥಾನದ ವ್ಯಾಪ್ತಿಯಲ್ಲಿನ ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಮತ್ತು ಯಾವುದೇ ವಯಸ್ಸಿನ ಮಿತಿ ಇಲ್ಲದ ಸಮಾಜ ಬಂದುಗಳಿಗೆ ಕೈಮಗ್ಗ, ಚರಕ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.






