ಇತರೆ

ರಾಧಿಕಾ ಕುಮಾರಸ್ವಾಮಿ ವಿಚಾರಣೆ ಬಗ್ಗೆ  ಜಮೀರ್ ಹೇಳಿದ್ದೇನು?

Views: 77

ಕನ್ನಡ ಕರಾವಳಿ ಸುದ್ದಿ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ಮಾಡಿದ್ದರು. ರಾಧಿಕಾ ಕುಮಾರಸ್ವಾಮಿ ವಿಚಾರಣೆ ಬಗ್ಗೆ ಇದೀಗ ಜಮೀರ್ ಪ್ರತಿಕ್ರಿಯಿಸಿದ್ದಾರೆ.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ಮಾಡಿದ್ದರು. ರಾಧಿಕಾ ಕುಮಾರಸ್ವಾಮಿ ವಿಚಾರಣೆ ಬಗ್ಗೆ ಇದೀಗ ಜಮೀರ್ ಪ್ರತಿಕ್ರಿಯಿಸಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರು ಮನೆ ತೆಗೆದುಕೊಳ್ಳುವಾಗ ಎರಡು ಕೋಟಿ ಸಾಲ ಪಡೆದಿದ್ದರು. ಆ ಬಗ್ಗೆ ನಾನು ಆದಾಯ ತೆರಿಗೆಯಲ್ಲಿ ತೋರಿಸಿದ್ದೇನೆ. ಅವರು ಕೂಡ ಇನ್‌ ಕಮ್ ಟ್ಯಾಕ್ಸ್‌ನಲ್ಲಿ ತೋರಿಸಿದ್ದಾರೆ. ನನ್ನ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು.

ನಂತರ ಅವರು ಪ್ರಕರಣವನ್ನು ಎಸಿಬಿಗೆ ಶಿಫಾರಸು ಮಾಡಿದ್ದರು. ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಕೇಸ್ ಹ್ಯಾಂಡಲ್ ಮಾಡ್ತಿದೆ. ಹೀಗಾಗಿ ರಾಧಿಕಾ ಕುಮಾರಸ್ವಾಮಿ ಅವರ ಹೇಳಿಕೆ ಪಡೆಯಲು ಕರೆದಿದ್ದಾರೆ. ಅವರು ಹೇಳಿಕೆ ಕೊಟ್ಟಿದ್ದಾರೆ. ಇನ್ ಕಮ್ ಟ್ಯಾಕ್ಸ್ನಲ್ಲಿ ನಾನು ಲೆಕ್ಕ ತೋರಿಸಿದ್ದೇನೆ, ಅವರೂ ಕೂಡ ತೋರಿಸಿದ್ದಾರೆ ಎಂದು ಜಮೀರ್ ಹೇಳಿದ್ದಾರೆ.

ಸೆಪ್ಟೆಂಬರ್ 1 ರಂದು ರಾಧಿಕಾ ಕುಮಾರಸ್ವಾಮಿ ತನಿಖೆ ಎದುರಿಸಿದ್ದರು. ಎರಡು ಕೋಟಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸಿದ್ದಾರೆ.

Related Articles

Back to top button