ಆರೋಗ್ಯ

ಯೋಗ ಗುರುವಿನಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ದೃಢವಾದ ಸಾಕ್ಷಿ: ಚಾರ್ಜ್‌ಶೀಟ್ ಸಲ್ಲಿಕೆ

Views: 81

ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧನದಲ್ಲಿದ್ದ ಯೋಗ ಗುರು ನಿರಂಜನಾ ಮೂರ್ತಿ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸರು ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ ವಿರುದ್ಧ ಗಂಭೀರ ಸಾಕ್ಷ್ಯಾಧಾರಗಳು ದೊರೆತಿದ್ದು, ಪೊಲೀಸರು ಪೋಕ್ರೋ (POCSO) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ಯೋಗ ಕೇಂದ್ರವೊಂದರಲ್ಲಿ ನಿರಂಜನಾ ಮೂರ್ತಿ ಯೋಗ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪ್ರಾಪ್ತಯೊಬ್ಬಳು ಯೋಗ ತರಬೇತಿಗೆ ಬಂದಿದ್ದು, ಆಕೆಗೆ “ನಿನ್ನ ಪ್ರತಿಭೆಯಿಂದ ದೇಶದ ಮಟ್ಟಕ್ಕೆ ಕೊಂಡೊಯ್ಯುತ್ತೇನೆ, ಸರ್ಕಾರಿ ಕೆಲಸವೂ ಸಿಗಬಹುದು” ಎಂದು ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ತನಿಖೆಯ ಸಮಯದಲ್ಲಿ ನಿರಂಜನಾ ಮೂರ್ತಿಯು ಅಪ್ರಾಪ್ತಯ ಮೇಲೆ ಅತ್ಯಾಚಾರ ಎಸಗಿರುವುದಕ್ಕೆ ದೃಢವಾದ ಸಾಕ್ಷಿಗಳು ದೊರೆತಿವೆ. ಮೊಬೈಲ್ ಫೋನ್‌ನಿಂದ ಕೆಲವು ವಿಡಿಯೋ ಮತ್ತು ಫೋಟೋಗಳು ವಶಕ್ಕೆ ಪಡೆದಿರುವುದಾಗಿ

ಫೋಟೋಗಳು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ. ಜೊತೆಗೆ ಹಲವಾರು ಮಹಿಳೆಯರೊಂದಿಗೆ ಅಶ್ಲೀಲ ಸಂಪರ್ಕ ಹೊಂದಿದ್ದ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

Related Articles

Back to top button